ಮೂಡಲಗಿ: ತಾಲೂಕಿನ ಪಟಗುಂದಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ —ಉಪಾಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರಾದ ಮಲ್ಲಪ್ಪ ಭಗವಂತ ಸಲ್ಲಾಗೋಳ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕೃಷ್ಣಪ್ಪ ಲಕ್ಷ್ಮಣ ಚಿನ್ನಾಕಟ್ಟಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಈ ಸಮಯದಲ್ಲಿ ನಿರ್ದೇಶಕರಾದ ತವನಪ್ಪ ಬೋಳಿ, ರೇವಪ್ಪ ತುಪ್ಪದ, ಕೆಂಪಣ್ಣ ಪಾಟೀಲ, ರಂಗಪ್ಪ ಪೂಜೇರಿ, ಅಪ್ಪಣ್ಣ ಪೂಜೇರಿ, ಮಾಲವ್ವ ಯರನಾಳ, ಶಾರವ್ವ ನಾಯ್ಕ, ರಾಮಪ್ಪ ಕೆಳಗೇರಿ, ಹೊಳೆವ್ವ ಪೂಜೇರಿ, ಸದಾಶಿವ ಸರ್ವಿ ಹಾಗೂ ಮಾಜಿ ಅಧ್ಯಕ್ಷರಾದ ರಾಮಗೌಡ ನಾಯ್ಕ, ರಾವಸಾಬ ಪಾಟೀಲ, ಚನ್ನಗೌಡ ಪಾಟೀಲ ಮುಖಂಡರಾದ ಟಿ.ಎನ್.ನಾಯ್ಕ, ಹನಮಂತ ನಾಯ್ಕ, ಮಾನಿಕ ಬೋಳಿ, ಗಿರಿಗೌಡ ಪಾಟೀಲ, ಪಾರೀಶ ಹುಕ್ಕೇರಿ, ಶಂಕರ ಪಾಟೀಲ, ಪರಸಪ್ಪ ಉಪ್ಪಾರ, ರಾಜು ಜರಾಳೆ, ಮಹದೇವ ಬಿಜಗುಪ್ಪಿ, ಅರ್ಜುಣ ನಾಯ್ಕ, ಭರತರಾಜ ಪಾಟೀಲ, ಸುರೇಶ ನಾಯ್ಕ, ನೂರಮಹ್ಮದ ಪೀರಜಾದೆ, ಚಂದ್ರು ಮೂಡಲಗಿ, ಸಕಾರಾಮ ಪೂಜೇರಿ, ಸಂತೋಷ ಬ.ಪಾಟೀಲ, ಮಲ್ಲಪ ಮೂಡಲಗಿ, ಬಾಳೇಶ ಬನಹಟ್ಟಿ, ಜಯವಂತ ಸರ್ವಿ, ಮಾರುತಿ ಸರ್ವಿ, ಬಸು ಖನಗಾಂವ ಮತ್ತಿತರು ಇದ್ದರು.
ಚುನಾವಣಾಧಿಕಾರಿಯಾಗಿ ಗೋಕಾಕ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ.ಗೋಖಲೆ ಮತ್ತು ಸಹಾಯಕ ಚುನಾವಣಾಧಿಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಜೀತ ಹೊಸಮನಿ ಕಾರ್ಯ ನಿರ್ವಹಿಸಿದರು.