- Advertisement -
ಮೂಡಲಗಿ: ವಿಧಾನಸಭೆ ಚುನಾವಣೆ ಹಿನ್ನೆಲೆ ಮತದಾರರು ಧೈರ್ಯದಿಂದ ಮತದಾನ ಮಾಡಿ ಸಂವಿಧಾನ ಹಕ್ಕು ಪಡೆಯಬೇಕು ಎಂದು ಸಶಸ್ತ್ರ ಸೀಮಾಬಲ ಪಡೆ ಮತ್ತು ಪಟ್ಟಣದ ಪೊಲೀಸ್ ಸಿಬ್ಬಂದಿ ಪಥ ಸಂಚಲನ ಕೈಗೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಮೂಡಲಗಿ ಪಟ್ಟಣದ ವಿದ್ಯಾನಗರ, ಅಂಬೇಡ್ಕರ್ ನಗರ, ಕಲ್ಮೇಶ್ವರ ವೃತ್ತ, ಸಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕರೆಮ್ಮ ಸರ್ಕಲ್, ಚೆನ್ನಮ್ಮ ಸರ್ಕಲ್ ಮಾರ್ಗವಾಗಿ ಮುಖ್ಯ ರಸ್ತೆಗಳಲ್ಲಿ ಶನಿವಾರ ಸಶಸ್ತ್ರ ಸೀಮಾಬಲ ಪಡೆಯ ಸುಮಾರು 100 ಯೋಧರು ಹಾಗೂ ಪೋಲೀಸ್ ಸಿಬ್ಬಂದಿ ಪಥ ಸಂಚಲನ ಮಾಡಿದರು.
ಈ ಸಂದರ್ಭದಲ್ಲಿ ಸಿಪಿಐ ಶ್ರೀಶೈಲ ಬ್ಯಾಕೋಡ, ಪಿಎಸ್‍ಐ ಸೋಮೇಶ ಗೆಜ್ಜಿ, ಹೆಚ್ಚುವರಿ ಪಿಎಸ್‍ಐ ಶಿವಕುಮಾರ್ ಬಿರಾದಾರ್, ಕುಲಗೋಡು ಪೊಲೀಸ್ ಠಾಣೆಯ ಪಿಎಸ್‍ಐ ಗೋವಿಂದಗೌಡ ಪಾಟೀಲ್ ಹಾಗೂ ಸಶಸ್ತ್ರ ಸಿಮಾಬಲ ಪಡೆಯ ಯೋಧರು ಮತ್ತು ಪೊಲೀಸ್ ಸಿಬ್ಬಂದಿಗಳು ಪಥ ಸಂಚಲದಲ್ಲಿ ಭಾಗವಹಿಸಿದ್ದರು.