spot_img
spot_img

ರಾಷ್ಟ್ರಾಭಿಮಾನ ಹುಟ್ಟಿಸುವ ಕಟ್ಟೀಮನಿ ಕೃತಿಗಳು – ಚಂದ್ರಶೇಖರ ಅಕ್ಕಿ ಅಭಿಮತ

Must Read

- Advertisement -

ಸವದತ್ತಿ: ನಾಡಿನ ಹಿರಿಯ ಕ್ರಾಂತಿಕಾರಿ ಕಾದಂಬರಿಕಾರ ಕಟ್ಟೀಮನಿಯವರು ೪ ಐತಿಹಾಸಿಕ ಕಾದಂಬರಿ ಬರೆದಿದ್ದು, ಅವು ಇಂದಿನ ವಿದ್ಯಾರ್ಥಿಗಳಿಗೆಲ್ಲ ರಾಷ್ಟ್ರಾಭಿಮಾನ ಹುಟ್ಟಿಸುವ ಕೃತಿಗಳಾಗಿವೆ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯ ಸಂಚಾಲಕ ಚಂದ್ರಶೇಖರ ಅಕ್ಕಿ ಹೇಳಿದರು.

ಇಲ್ಲಿನ ಕುಮಾರೇಶ್ವರ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಜರುಗಿದ ಬೆಳಗಾವಿ ಬಸವರಾಜ ಕಟ್ಟೀಮನಿಯವರ ಐತಿಹಾಸಿಕ ಕಾದಂಬರಿಗಳ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

- Advertisement -

ನಂತರ ನಡೆದ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಡಾ. ವಾಯ್.ಎಮ್. ಯಾಕೊಳ್ಳಿ ಮಾತನಾಡಿ, ಜಾನಪದ ಲಾವಣಿಯಲ್ಲಿ ಮೂಡಿಬಂದ ರಾಯಣ್ಣ ಚಿತ್ರಣವನ್ನು ಕಾದಂಬರಿ ಮೂಲಕ ರಸವತ್ತಾಗಿ ಚಿತ್ರಿಸಿದ ಮೇರು ಕಾದಂಬರಿಕಾರ ಇವರು. ರಾಜನಲ್ಲದೇ, ಅಧಿಕಾರಿಯಲ್ಲದೇ, ದೊಡ್ಡ ಹುದ್ದೆಯಲ್ಲಿರದೇ ಕೇವಲ ತಾಯಿ ನಾಡನ್ನು ಕಾಪಾಡಲು ಬ್ರಿಟೀಷರ ಮೋಸಕ್ಕೆ ಬಲಿಯಾದ ಕ್ರಾಂತಿಕಿಡಿ ರಾಯಣ್ಣನ ಜೀವನ ಚರಿತ್ರೆ ಮನತಣಿಸುವಂತೆ ಮೂಡಿಬಂದಿರುವದು ಗಮನಾರ್ಹ ಎಂದರು.

ಎರಡನೇ ಉಪನ್ಯಾಸ ನೀಡಿದ ತುರಕರಶೀಗಿಹಳ್ಳಿ ಮುಖ್ಯೋಪಾಧ್ಯಾಯ ಮಹೇಶ ಚನ್ನಂಗಿ,ಮಾತನಾಡುತ್ತ, ಪೌರುಷ ಪರೀಕ್ಷೆ ಕಾದಂಬರಿಯು ಕಿತ್ತೂರ ಸಂಸ್ಥಾನದ ಮಲ್ಲಸರ್ಜ ದೇಸಾಯಿ, ಟಿಪ್ಪು ಸುಲ್ತಾನನಿಗೆ ಚಳ್ಳೆ ಹಣ್ಣು ತಿನ್ನಿಸಿ ಪಾರಾದ ಕಥೆಯಾಗಿದೆ.ನಿಜಕ್ಕೂ ಬೆಟಗೇರಿ ಕೃಷ್ಣಶರ್ಮರವರು ಅಂದಿನ ಕಾಲಘಟ್ಟದ ಅಧ್ಯಯನ ಶೀಲ ಬರವಣಿಗೆಯನ್ನು ತಮ್ಮ ಕಾದಂಬರಿಯಲ್ಲಿ ರೂಢಿಸಿದ್ದು ಅಮೋಘ ಎಂದರು.

- Advertisement -

ಅಧ್ಯಕ್ಷತೆ ವಹಿಸಿದ್ದ ಕಾದಂಬರಿಕಾರ ಯ.ರು. ಪಾಟೀಲ ಮಾತನಾಡಿ, ಇತಿಹಾಸದ ಕಾದಂಬರಿ ಬರೆಯುವದು ಕಷ್ಟದ ಕೆಲಸ. ಇತಿಹಾಸವನ್ನು ಕಾಲ್ಪನಿಕತೆಯಲ್ಲಿ ಬೆರೆಸಿ ಜನರು ಓದುವಂತೆ ನೀಡಿದ ಮಹಾನ್ ಕಾಂದಂಬರಿಕಾರರಲ್ಲಿ ಕಟ್ಟೀಮನಿ ಅಜರಾಮರ ಎಂದರು.

ಗೋಷ್ಠಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವೈ.ಬಿ.ಕಡಕೋಳ ನಿರೂಪಿಸಿದರು.

ಎರಡನೇ ಉಪನ್ಯಾಸ ಗೋಷ್ಠಿಯಲ್ಲಿ ಬೆಳಗಾವಿ ಹಿರಿಯ ಸಾಹಿತಿ ಡಾ. ಬಿ.ಜಿ. ಕೆಂಪಣ್ಣವರ, ಇವರ ಕಾದಂಬರಿಗಳು ಹೊಗಳಿಕೆಯ ಬದಲು ವಾಸ್ತವಾಂಶಗಳನ್ನು ಸೂಚಿಸಿವೆ. ನರಗುಂದದ ಬಂಡಾಯದಲ್ಲಿ ಬಾಬಾ ಸಾಹೇಬರನ್ನು ಮೋಸದಿಂದ ಬಂಧಿಸಿ ಗಲ್ಲಿಗೇರಿಸಿದ ಕುರಿತು ವಿವರಿಸಲಾಗಿದೆ ಎಂದು ಬಂಡಾಯದ ಕಥೆಯನ್ನು ಚಿತ್ರವತ್ತಾಗಿ ವಿವರಿಸಿದರು.

ಮ.ನ.ರ. ಸಂಘದ ಶಿಕ್ಷಣ ಮಹಾವಿದ್ಯಾಲಯದ ಡಾ. ನಿರ್ಮಲಾ ಬಟ್ಟಲ ಅಕ್ಕಮಹಾದೇವಿ ಜೀವನ ಚರಿತ್ರೆಯನ್ನು ವಚನಗಳ ಆಧಾರದ ಮೇಲೆ ರೋಚಕವಾಗಿ ನಿರೂಪಿಸಿದ ಕಾದಂಬರಿ ಹಿರಿಯ ನವಿಲು ಎಂದು ಬಣ್ಣಿಸಿದರು. ಅಷ್ಟೇ ಅಲ್ಲ ಕೌಶಿಕ ಮಹಾರಾಜನಿಗೆ ತನ್ನ ೩ ಕಟ್ಟಳೆಗಳನ್ನು ಹಾಕುವ ಅಕ್ಕಮಹಾದೇವಿ ಅವುಗಳನ್ನು ಮುರಿಯುವ ಕೌಶಿಕನ ಹಿನ್ನಲೆಯ ಘಟನೆಗಳನ್ನು ಕಟ್ಟೀಮನಿಯುವರು ಕಾದಂಬರಿಯಲ್ಲಿ ನಿರೂಪಿಸಿದ ರೀತಿಯನ್ನು ವಿವರವಾಗಿ ತಿಳಿಸಿದರು. ಎಸ್.ಎಸ್. ವಾರೆಪ್ಪನವರ ಈ ಗೋಷ್ಠಿಯನ್ನು ನಿರೂಪಿಸಿದರು.

ಪ್ರತಿಷ್ಠಾನದ ಸದಸ್ಯ ಡಾ. ರಾಮಕೃಷ್ಣ ಮರಾಠೆ ಅವರು ಕಟ್ಟೀಮನಿಯವರ ಕಾದಂಬರಿ ಮೂಲಕ ಸಾಕ್ಷಾತ್ ಇತಿಹಾಸವನ್ನು ಕಣ್ಣಮುಂದೆ ನಡೆದಂತೆಯೇ ಚಿತ್ರಿಸುತ್ತಾರೆಂದರು.

ಸಮಾರೋಪ ಸಮಾರಂಭದಲ್ಲಿ ಸಾಹಿತ್ಯಶ್ರೀ ಪ್ರಶಸ್ತಿ ಪಡೆದ ವಾಯ್.ಎಮ್. ಭಜಂತ್ರಿಯವರನ್ನು ಸತ್ಕರಿಸಲಾಯಿತು. ದಿನದ ಸಂಕಿರಣ ಮುಕ್ತಾಯದ ನಂತರ ಸಮಾರೋಪದಲ್ಲಿ ಡಾ. ಕೆ.ಆರ್. ದುರ್ಗಾದಾಸ, ಇವರು ಕೇವಲ ಇತಿಹಾಸ ಪಾತ್ರಗಳನ್ನು ಚಿತ್ರಿಸದೇ ಅವರ ಜೀವನದ ಮೌಲ್ಯಗಳನ್ನೂ ಕಟ್ಟಿಕೊಟ್ಟಿದ್ದಾರೆ ಎಂದರು.

ಈ ವೇಳೆ ಜಿ.ವಾಯ್. ಕರಮಲ್ಲಪ್ಪನವರ, ಕೆ. ರಾಮರಡ್ಡಿ, ವೈ.ಬಿ. ಕಡಕೋಳ, ಪ್ರಾಚಾರ್ಯ ಡಾ. ಎಲ್.ಎನ್. ಕಳ್ಳಿ, ಎಸ್.ಎಸ್. ವಾರೆಪ್ಪನವರ, ಬಿ.ಎಸ್. ಶಿಂಧೆ ಹಾಗೂ ಪ್ರಮುಖರು ಇದ್ದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group