spot_img
spot_img

ಅತಿವೃಷ್ಟಿ ಹಾಗೂ ಪ್ರವಾಹ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಿ – ಅಧಿಕಾರಿಗಳಿಗೆ ಬಾಲಚಂದ್ರ ಜಾರಕಿಹೊಳಿ ಸೂಚನೆ

Must Read

spot_img
- Advertisement -

ಗೋಕಾಕ- ಕಳೆದ ಆಗಷ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾಗಿರುವ ರೈತರ ಬೆಳೆಗಳಿಗೆ ಪರಿಹಾರ ಮೊತ್ತವನ್ನು ವಿತರಿಸುವ ಕೆಲಸವಾಗಬೇಕು. ಗೋಕಾಕ – ಮೂಡಲಗಿ ತಾಲ್ಲೂಕು ಸೇರಿ ೬೫೧೬ ಹೆಕ್ಟೇರ್ ಪ್ರದೇಶವು ಬೆಳೆ ಹಾನಿಯಾಗಿದ್ದು, ಈ ಕೂಡಲೇ ರೈತರ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡುವಂತೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಎನ್ಎಸ್ಎಫ್ ಕಛೇರಿಯಲ್ಲಿ ಸೋಮವಾರದಂದು ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ರೈತರಿಗೆ ಆಗಿರುವ ಬೆಳೆ ನಷ್ಟದ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಇದುವರೆಗೂ ಪರಿಹಾರ ಧನ ಬಂದಿಲ್ಲವೆಂದು ದೂರಿದರು.

ಅತಿವೃಷ್ಟಿ ಹಾಗೂ ಪ್ರವಾಹದಿಂದ ಸುಮಾರು ೯ ಕೋಟಿ ರೂ ಗಳಷ್ಟು ಕೃಷಿ ಬೆಳೆಗಳು ನಷ್ಟವಾಗಿವೆ. ಇದರಲ್ಲಿ ಈಗಾಗಲೇ ಸುಮಾರು ೭ ಕೋ.ರೂ ಗಳ ಬೆಳೆ ಪರಿಹಾರ ಸಂಬಂಧವಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ ಇದುವರೆಗೂ ರೈತರಿಗೆ ಪರಿಹಾರ ಧನ ಜಮಾ ಆಗಿಲ್ಲವೆಂದು ಅವರು ಬೇಸರ ಹೊರಹಾಕಿದರು.

- Advertisement -

ನೀರಾವರಿ ಕ್ಷೇತ್ರಗಳ ಬೆಳೆಗಳಿಗೆ ಪ್ರತಿ ಹೆಕ್ಟೆರ್‌ಗೆ ರೂ. ೧೭ ಸಾವಿರ ಪರಿಹಾರ ನೀಡಲು ಮುಂದಾಗಿದೆ. ಅದರಲ್ಲಿ ಗೋಕಾಕ ತಾಲ್ಲೂಕಿನಲ್ಲಿ ೨೧೭೩ ಮತ್ತು ಮೂಡಲಗಿ ತಾಲ್ಲೂಕಿನಲ್ಲಿ ೪೩೪೩ ಹೆಕ್ಟೇರ್ ಪ್ರದೇಶವು ನೀರು ಪಾಲಾಗಿದೆ. ಜೊತೆಗೆ ೫೦ ಹೆಕ್ಟೆರ್ ತೋಟಗಾರಿಕೆ ಬೆಳೆಗಳು ನಾಶವಾಗಿವೆ ಇದರಿಂದ .ರೈತರು ಚಿಂತಾಜನಕ ಸ್ಥಿತಿಯಲ್ಲಿದ್ದು, ಕೂಡಲೇ ಸರ್ಕಾರವು ಹಾನಿಗೀಡಾದ ರೈತರ ಸಂಕಷ್ಟಕ್ಕೆ ಮುಂದಾಗಿ ಅವರ ಖಾತೆಗಳಿಗೆ ಪರಿಹಾರ ಮೊತ್ತವನ್ನು ನೀಡುವಂತೆ ಅವರು ಆಗ್ರಹಿಸಿದರು.
ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸಲು ತಾಲ್ಲೂಕಾ ಪಂಚಾಯತ್ ಕ್ರಿಯಾ ಯೋಜನೆಯೊಂದನ್ನು ಸಿದ್ಧಪಡಿಸಬೇಕು. ಪ್ರತಿ ಗ್ರಾಮ ಪಂಚಾಯತಿಗಳಿಗೆ ತಲಾ ೪೦ ಲಕ್ಷ ರೂ ತನಕ ರಸ್ತೆಗಳ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ನೀಡಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅರಭಾವಿ ಕ್ಷೇತ್ರಕ್ಕೆ ವಿವಿಧ ವಸತಿ ಯೋಜನೆಗಳಡಿ ಸುಮಾರು ಒಟ್ಟು ೧೪೮೦ ಮನೆಗಳು ಮಂಜೂರಾಗಿವೆ. ಇದರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆಯಡಿ ಅವರಾದಿಗೆ ೧೦೦, ದುರದುಂಡಿಗೆ ೨೫, ಬಡಿಗವಾಡಗೆ ೪೦, ತುಕ್ಕಾನಟ್ಟಿಗೆ ೧೫, ಯಾದವಾಡಕ್ಕೆ ೭೦, ಕಳ್ಳಿಗುದ್ದಿ, ನಲ್ಲಾನಟ್ಟಿಗೆ ತಲಾ ೨೫, ಬಸವ ವಸತಿ ಯೋಜನೆಯಡಿ ಬಳೋಬಾಳ, ನಲ್ಲಾನಟ್ಟಿಗೆ ತಲಾ ೭೫, ತಪಸಿಗೆ ೨೦೦, ಹುಣಶಾಳ ಪಿವೈ ಗೆ ೧೦೦, ಕಾಮನಕಟ್ಟಿಗೆ ೧೩೦, ಅವರಾದಿಗೆ ೨೦೦, ಯಾದವಾಡಕ್ಕೆ ೧೫೦, ಬಡಿಗವಾಡಗೆ ೧೦೦ ಮತ್ತು ಕಳ್ಳಿಗುದ್ದಿ ಗ್ರಾಮ ಪಂಚಾಯತಿಗೆ ೧೫೦ ಹೆಚ್ಚುವರಿ ಮನೆಗಳು ಮಂಜೂರಾಗಿವೆ ಎಂದು ಸಭೆಗೆ ವಿವರಿಸಿದ ಅವರು, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಫಲಾನುಭವಿಗಳ ಪಟ್ಟಿಯನ್ನು ಪ್ರಕಟಿಸಬೇಕು. ಇದರಲ್ಲಿ ಯಾರಾದರೂ ಫಲಾನುಭವಿಗಳಿಂದ ದುಡ್ಡು ಪಡೆದು ಆಯ್ಕೆ ಮಾಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು. ಮನೆಗಳ ಹಂಚಿಕೆಯ ವಿಷಯದಲ್ಲಿ ನಿಜವಾದ ಬಡ ಕುಟುಂಬಗಳಿಗೆ ಅನ್ಯಾಯವಾಗಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇದಕ್ಕಾಗಿ ಸರ್ಕಾರವು ಬಸವ ವಸತಿ ಮನೆಗಳ ನಿರ್ಮಾಣಕ್ಕೆ ೧.೫೦ ಲಕ್ಷ ರೂ ಅನುದಾನ ಕೊಡಲಿದ್ದು,. ಅಂಬೇಡ್ಕರ್ ವಸತಿ ಯೋಜನೆಯ ಫಲಾನುಭವಿಗಳಿಗೆ ೨.೨೫ ಲಕ್ಷ ರೂ. ಗಳನ್ನು ಪ್ರತಿ ಕುಟುಂಬದ ಫಲಾನುಭವಿಗಳಿಗೆ ಸರ್ಕಾರ ಅನುದಾನವನ್ನು ನೀಡಲಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಿಗಳಿಗೂ ತಲಾ ೧೦೦ ಮನೆಗಳನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಭೆಯಲ್ಲಿ ತಿಳಿಸಿದರು.

- Advertisement -

ಮೂಡಲಗಿ ಪುರಸಭೆ, ಅರಭಾವಿ, ಕಲ್ಲೋಳಿ, ನಾಗನೂರ ಪಟ್ಟಣ ಪಂಚಾಯತಿಗಳ ಅಭಿವೃಧಿಗಾಗಿ ತಲಾ ೧೦ ಕೋಟಿ ರೂಪಾಯಿ ಅನುದಾನವನ್ನು ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ಅನುದಾನದ ಬಿಡುಗಡೆಗಾಗಿ ಪ್ರಯತ್ನ ಮಾಡುತ್ತೇನೆ. ಸರ್ಕಾರದಿಂದ ಅನುದಾನ ಬಿಡುಗಡೆಯಾದರೆ ಶರವೇಗದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಲಿವೆ. ಆದಷ್ಟು ಜನರ ಮೂಲ ಸೌಕರ್ಯಗಳನ್ನು ನೀಗಿಸಲು ಪ್ರಯತ್ನ ಪಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಮೇಶ್ವರ ಏತ ನೀರಾವರಿ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲವೆಂಬ ದೂರುಗಳು ಬರುತ್ತಿವೆ. ಕೂಡಲೇ ಇದನ್ನು ಅಧಿಕಾರಿಗಳು ಸರಿಪಡಿಸಬೇಕು. ಲೋಳಸೂರ ಸೇತುವೆ ಕಾಮಗಾರಿಗೆ ೫೦ ಕೋಟಿ ರೂಪಾಯಿ ಅನುದಾನ ಬಂದಿದ್ದು, ಇದರ ಕಾಮಗಾರಿಯನ್ನು ಆರಂಭಿಸಬೇಕು. ರಸ್ತೆಗಳ ಸುಧಾರಣೆಗಾಗಿ ೬೫ ಕೋಟಿ ರೂಪಾಯಿಗಳ ಕಾಮಗಾರಿಗೆ ಪ್ರಸ್ತಾವನೆಯು ಸಲ್ಲಿಕೆಯಾಗಿದೆ. ನಿರಂತರ ಜ್ಯೋತಿ ಸಂಪರ್ಕಕ್ಕಾಗಿ ರೈತರಿಂದ ಬೇಡಿಕೆಗಳು ಬರುತ್ತಲೇ ಇವೆ. ತಿಗಡಿ ಮತ್ತು ಸುಣಧೋಳಿ ಜ್ಯಾಕ್ ವೆಲ್ ಬಗ್ಗೆಯೂ ನಿರಂತರ ಕಾಳಜಿ ವಹಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು. ಭೂ- ಮಾಪನ ಇಲಾಖೆಯ ಅಧಿಕಾರಿಗಳ ಬಗ್ಗೆಯೂ ರೈತರಿಂದ ವ್ಯಾಪಕವಾದ ದೂರುಗಳು ಈಗಾಗಲೇ ಬಂದಿವೆ. ಸಾಕಷ್ಟು ಬಾರಿ ತಿಳಿ ಹೇಳಿದರೂ ರೈತರ ಕೂಗುಗಳಿಗೆ ಸ್ಪಂದಿಸುತ್ತಿಲ್ಲ. ಪರಿಸ್ಥಿತಿ ಹೀಗೇಯೇ ಮುಂದುವರೆದರೆ ಯಾವುದೇ ಮುಲಾಜಿಲ್ಲದೇ ಅಧಿಕಾರಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನು ಶಾಸಕರು ನೀಡಿದರು.

ದೇವಸ್ಥಾನಗಳಿಗೆ ತೆರಳುತ್ತಿರುವ ಭಕ್ತರ ವಾಹನಗಳನ್ನು ಪೋಲಿಸರು ನಿಲ್ಲಿಸಿ ದಂಡವನ್ನು ಹಾಕುತ್ತಿರುವ ದೂರುಗಳು ಬರುತ್ತಿವೆ. ಕಾನೂನು ಪ್ರಕಾರವೇ ದಂಡವನ್ನು ಹಾಕಿ. ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಅನವಶ್ಯಕವಾಗಿ ಪ್ರಕರಣ ದಾಖಲು ಮಾಡಬೇಡಿ. ಇದರಿಂದ ಭಕ್ತರಿಗೆ ಕಿರಿಕಿರಿಯಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳಿಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಎಚ್ಚರಿಸಿದರು.

ಗೋಕಾಕ ತಹಶೀಲ್ದಾರ ಡಾ. ಮೋಹನ ಭಸ್ಮೆ, ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ, ಗೋಕಾಕ ತಾ. ಪಂ. ಇಓ ಪರಶುರಾಮ ಗಸ್ತೆ, ಮೂಡಲಗಿ ತಾ.ಪಂ. ಇಓ ಫಕೀರಪ್ಪ ಚಿನ್ನನ್ನವರ ಸೇರಿದಂತೆ ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಅಭಿಯಂತರರು ಈ ಸಭೆಯಲ್ಲಿ ಭಾಗವಹಿಸಿದ್ದರು.

ನಮ್ಮ ಬಿಜೆಪಿ ಸರ್ಕಾರವಿದ್ದಾಗ ಅಕ್ಟೋಬರ್ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳು ಆರಂಭವಾಗುತ್ತಿದ್ದವು. ಆದರೆ ಈಗಿರುವ ಕಾಂಗ್ರೆಸ್ ಸರ್ಕಾರದವರು ಬೇಗನೇ ಕಾರ್ಖಾನೆಗಳನ್ನು ಪ್ರಾರಂಭಿಸಿದರೆ ಅಂತಹ ಕಾರ್ಖಾನೆಗಳ ಪರವಾಣಿಗೆಯನ್ನು ರದ್ದುಪಡಿಸುವ ಎಚ್ಚರಿಕೆಯನ್ನು ನೀಡಿದೆ. ನವ್ಹೆಂಬರ್ ೧೫ ರ ನಂತರ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸುವಂತೆ ಸರ್ಕಾರವು ನಿರ್ದೇಶನ ನೀಡಿದೆ. ಇದರಿಂದ ರೈತರಿಗೆ ತುಂಬ ತೊಂದರೆಯಾಗುತ್ತಿದೆ. ರೈತರೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿರುವುದು ಖಂಡನೀಯ.-

ಬಾಲಚಂದ್ರ ಜಾರಕಿಹೊಳಿ. ಶಾಸಕರು ಮತ್ತು ಪ್ರಭಾ ಶುಗರ್ ಮಾರ್ಗದರ್ಶಕರು

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group