ಬೀದರ್ – ೧೫ ನೇ ಹಣಕಾಸು ಆಯೋಗದ ಅನುದಾನದಲ್ಲಿ ಅವ್ಯವಹಾರ ಮಾಡಿದ ಆರೋಪದ ಮೇರೆಗೆ ಜಿಲ್ಲೆಯ ಹುಲಸೂರ ಗ್ರಾಮ ಪಂಚಾಯತ್ ಪಿಡಿಓ ರಮೇಶ್ ಮಿಲಿಂದಕರ ಅಮಾನತುಗೊಂಡಿದ್ದಾರೆ.
ಅಮಾನತು ಮಾಡಿ ಬೀದರ ಜಿಲ್ಲಾ ಪಂಚಾಯತ ಸಿಇಓ ಗಿರೀಶ್ ಬದೋಲೆ ಆದೇಶ ಹೊರಡಿಸಿದ್ದಾರೆ.
ಗ್ರಾಮ ಸಭೆ, ಸಾಮಾನ್ಯ ಸಭೆ ನಡೆಸದೆ ಕ್ರಿಯಾಯೋಜನೆ ಸಿದ್ಧಪಡಿಸಿ ಹಣ ಲೂಟಿ ಆರೋಪ, ಸದಸ್ಯರ ಗಮನಕ್ಕೆ ತರದೆ ನಿಯಮ ಮೀರಿ ಬಿಲ್ ಪಾವತಿ ಮಾಡಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಸಿಇಓಗೆ ಸದಸ್ಯರಿಂದ ದೂರು ಹೋಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಂದ ತನಿಖೆ ಕೈಗೊಂಡು, ತನಿಖೆ ವೇಳೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಿಡಿಓ ಅಮಾನತು ಆದೇಶ ಹೊರಡಿಸಲಾಗಿದೆ.
ಸರ್ಕಾರದ ನಿಯಮ ಮೀರಿ 15ನೇ ಹಣಕಾಸಿನ ಅನುದಾನ ಪಾವತಿ ಮಾಡಿರುವುದು ಬೆಳಕಿಗೆ ಬಂದಿದೆ.
ವರದಿ : ನಂದಕುಮಾರ ಕರಂಜೆ, ಬೀದರ

