spot_img
spot_img

ಸ್ಫೂರ್ತಿ ನೀಡುವ ಪೇಯ, ಚಹಾ

Must Read

ಹೆಸರಿಗೆ ಇದೊಂದು ಪೇಯವಷ್ಟೆ. ಆದರೆ‌ ಇದರ ಆಳ ಅಗಲ ಸಾಗರದಷ್ಟು. ಜಗದಗಲ ತನ್ನ ಕದಂಬಬಾಹುಗಳನ್ನು ಹರಡಿರುವ ಚಹಾ ಎಲ್ಲಾ ದೇಶದವರ ಎಲ್ಲ ವರ್ಗದವರ ಮೆಚ್ಚಿನ ಪೇಯವಾಗಿದೆ.

ಯಾವಾಗಲು ಹೊರಗಿನವರನ್ನು ಎದೆಗೊತ್ತುಕೊಳ್ಳುವ ನಮ್ಮ ಭಾರತಿಯರಿಗೆ ಚೀನಾ ಮೂಲದ ಈ ಪೇಯವನ್ನು ಪರಿಚಯಿಸಿದವರು ನಮ್ಮನ್ನಾಳಿ ದೇಶದೋಚಿದ ಬ್ರಿಟಿಷರು. ತಮ್ಮ ಭಾಷೆಯ ಛಾಪನ್ನು ನಮ್ಮ ಹಣೆಗೊತ್ತಿ ಹೋದಂತೆ ಚಹಾದ ತಲಬನ್ನು ಹಚ್ಚಿಹೋದವರು.

ಶುದ್ಧ ಹಸುವಿನ ಹಾಲನ್ನು ಸೇವಿಸುವರೆಲ್ಲಾ ಮನೆಯಲ್ಲಿ ಕದ್ದು ಚಹಾಕುಡುವ ಮಟ್ಟಿಗೆ ನಮ್ಮನ್ನಾ ಅದು ಆವರಿಸಿಕೊಂಡು ಬಿಟ್ಟಿದೆ. ಇತ್ತೀಚಿಗಂತೂ ಚಹಾ ಎಲ್ಲಾವರ್ಗದವರ ಪ್ರತಿಷ್ಠೆಯ ಸಂಕೇತವಾಗಿದೆ ಅಂದರೂ ತಪ್ಪಿಲ್ಲಾ. ಮೊದಲ ಸಲ ಮನೆಗೆ ಬಂದವರಿಗೆ,ಹೊಸ ಪರಿಚಯಕ್ಕೆ , ವಧುಪರೀಕ್ಷೆಗೆ, ಗೆದ್ದಾಗ,ಸಂತೋಷಪಟ್ಟಾಗ ಕುಡಿದು ಕುಡಿಸುವ ಚಹಾ ಶೋಕಾಚರಣೆಯಲ್ಲಿಯು ಬಂದುನಿಲ್ಲುತ್ತದೆ.

ಮನಸ್ಸಿಗೆ ಬೇಸರವಾದಾಗ, ಆರೋಗ್ಯ ಕೆಟ್ಟಾಗ, ಸತ್ತವರ ಮನೆಗೆ ಮಾತನಾಡಿಸಲು ಹೋದಾಗಲು ಇದರದ್ದೆ ಸ್ವಾಗತ. ಎಲ್ಲರಲಿ ಅಗ್ರಪೂಜೆ ಗಣಪನಿಗಿರುವಂತೆ ಎಲ್ಲೆಡೆ ಮೊದಲು ಚಹಾ. ಕಾರಣ ಇದರಲ್ಲಿರುವ ಎಂಟಿಆಕ್ಸಿಡೆಂಟ್ ಎಂಬ ಉತ್ತೇಜಕ ಅಂಶವೆ ಕಾರಣವಾಗಿದೆ.

ಚಹಾ ಸೇವಿಸಿದ ನಂತರ ಮೆದುಳಿನ ನರಮಂಡಲಕ್ಕೆಉತ್ತೇಜನ ಸಿಕ್ಕು ವ್ಯಕ್ತಿ ಕೂಡಲೆ ಹುರುಪಿನಿಂದ ಕಾರ್ಯಪ್ರವೃತ್ತನಾಗುತ್ತಾ ಎಂಬುದು ಕೆಲಮಟ್ಟಿಗೆ ವೈಜ್ಞಾನಿಕವಾಗಿ ರುಜುವಾತಾದರೆ ಬಹಳಷ್ಟು ಮಟ್ಟಿಗೆ ಮಾನಸಿಕವಾದ ಬಲವಾದ ನಂಬಿಕೆಯೆ ಇದಕ್ಕೆ ಕಾರಣವಾಗಿದೆ ಎಂದರೆ ತಪ್ಪಿಲ್ಲಾ. ಇಗ ಜಗತ್ತಿನಲ್ಲಿ ಚಹಾ ಬೆಳೆಯುವ ,ಬಳಸುವಲ್ಲಿ ನಾವು ಭಾರತಿಯರು ಮೂರನೆ ನಂಬರಿಗಿದ್ದೆವೆ.

ಮೊದಲೆಲ್ಲಾ ಹೋಟೆಲಗಳಲ್ಲಿ ತಿಂಡಿ ತಿಂದ ನಂತರ ಚಹಾ ಕುಡಿಯುವ ರೂಢಿ ಇತ್ತು. ಆದರೆ ಇತ್ತೀಚೆಗೆ ಚಹಾದ ಪ್ರತ್ಯೇಕ ಹೋಟೆಲುಗಳೆ ಹುಟ್ಟಿವೆ. ಚಹಾದ ವ್ಯಾಪಾರ ಹೆಚ್ಚಿದಂತೆ ಅದನ್ನು ಮಾಡಲು ಬಳಸುವ ವೈವಿಧ್ಯಮಯ ಪಾತ್ರೆಗಳು, ವಿವಿಧ ವಿನ್ಯಾಸದ ಕಪ್ಪೆಗಳು,ಮಗ್ ಗಳು ಹೊಸಹೊಸ ಆವಿಷ್ಕಾರಗಳಾಗಿ ಎಲ್ಲಾ ಬಗೆಯ ಲೋಹಗಳಲ್ಲಿಯು ಚಹಾದ ಕಪ್ಗಳ ತಯಾರಿಕೆ ಉದ್ಯಮವಾಗಿ ಬೆಳೆಯತೊಡಗಿದೆ.

ಹಾಲು,ನೀರು,ಸಕ್ಕರೆ, ಚಹಾಪುಡಿ ಬಳಸಿ ತಯಾರಿಸುವ ಈ ಪೇಯವಿಂದು ನಾನಾ ವಿಧವಾಗಿ ಹೊಸ ರೂಪ ಪಡೆದಿದೆ.

ಗ್ರೀನ್ ಟೀ, ಬ್ಲಾಕ್ ಟೀ,ರೆಡ್ ಟೀ,ಬ್ರೌನ್ ಟೀ ಹೀಗೆ ಹತ್ತಾರು ಬಗೆಗಳಲ್ಲಿಆಯಾಪ್ರದೇಶ ಪ್ರಾಂತದ ಹೆಸರುಗಳಲ್ಲಿ ಗುರುತಿಸಿಕೊಳ್ಳುತ್ತದೆ. ನಿರಾಹಾರ ಉಪವಾಸ ವೃತ ಮಾಡುವವರಿಗೆ ಚಹಾವೆ ಅಂದಿನ ಜೀವಾಮೃತವಾಗಿರುತ್ತದೆ. ಆದರೆ ಅತೀ ಯಾದರೆ ಇದು ಅಪಾಯವೆ. ಯಾವುದಕ್ಕೂ ಮಿತವಾಗಿ ಬಳಸುವದೊಳ್ಳೆಯದು. ಮನಸ್ಸಿಗೆ ಉಲ್ಲಾಸ ಕೊಡುವ ಚಹಾ ಮುಖದ ಸೌಂದರ್ಯವನ್ನು ಬಹುಕಾಲ ಹಿಡಿದಿಡುವುದು ಎಂಬುದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದ ಸಂಗತಿಯಾಗಿದೆ.ಚಹಾದ ಬಗ್ಗೆ ಕಾದಂಬರಿಯನ್ನೆ ಬರೆಯಬಹುದು ಆದರಿಗ ಚಹಾದ ಸಮಯ ,ಬನ್ನಿ ಚಹಾ ಕುಡಿಯೋಣ.


ಶ್ರೀಮತಿ ಆಶಾ ಎಸ್ ಯಮಕನಮರಡಿ

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!