ನಜೀರ್ ಅಹ್ಮದ್ ಕಂಗನೊಳ್ಳಿ ಅವರಿಗೆ ಎಮ್ ಎಲ್ ಸಿ ಸ್ಥಾನ ನೀಡಲು ಪೀರಜಾದೆ ಒತ್ತಾಯ

0
353

ಮೂಡಲಗಿ : ಬಾಗಲಕೋಟ ಜಿಲ್ಲಾ ಕಾಂಗ್ರೇಸ್ ಪಕ್ಷದ ಉಪಾಧ್ಯಕ್ಷರಾಗಿ ಹಾಗೂ ಕೆ.ಪಿ.ಸಿ.ಸಿ ಸದಸ್ಯರಾಗಿ ಕಾಂಗ್ರೇಸ ಪಕ್ಷದ ಸಂಘಟಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಜಮಖಂಡಿ ನಗರದ ನಜೀರಅಹ್ಮದ ಅಬ್ಬಾಸಅಲಿ ಕಂಗನೊಳ್ಳಿ ಅವರನ್ನು ವಿಧಾನ ಪರಿಷತ್ತಿನಲ್ಲಿ ಖಾಲಿ ಇರುವ 4 ಸ್ಥಾನಗಳ ಪೈಕಿ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಬೇಕೆಂದು ಪಟ್ಟಣದ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸಾಕೀಬ ಪೀರಜಾದೆ ಒತ್ತಾಯಿಸಿದರು.

ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಗುರುವಾರದಂದು ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮುಸ್ಲಿಂ ಅಲ್ಪಸಂಖ್ಯಾತರಿಗೆ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಸ್ಥಾನ ಮಾನ ಸಿಕ್ಕಿಲ್ಲ. ಆದ್ದರಿಂದ ನಜೀರಅಹ್ಮದ ನಮ್ಮ ಸಮುದಾಯದ ಜನರಿಗಾಗಿ ಹಾಗೂ ಸಮಾಜಕ್ಕಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ ಅದು ಅಲ್ಲದೆ ನಿರಂತರವಾಗಿ ಕಾಂಗ್ರೆಸ್ ಪಕ್ಷದಲ್ಲಿ ಪಕ್ಷ ಕಟ್ಟುವಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದಾರೆ ಹಾಗೂ ಅಪಾರ ಅನುಭವಿಗಳಾದ ಇವರನ್ನು ಆಯ್ಕೆ ಮಾಡಬೇಕು ಎಂದರಲ್ಲದೆ ಕಂಗನೊಳ್ಳಿ ಅವರು, ಸನ್ 1990 ರಿಂದ 1998 ರ ವರೆಗೆ ಜಮಖಂಡಿ ತಾಲೂಕಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ನಂತರ ಬಾಗಲಕೋಟ ಜಿಲ್ಲಾ ಯುವ ಕಾಂಗ್ರೇಸ್ ಸಮೀತಿಯ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಏಳಿಗೆಗಾಗಿ ಹಲವಾರು ಸಂಘಟನಾತ್ಮಕ ಕಾರ್ಯಗಳನ್ನು ಕೈಗೊಂಡಿದ್ದು ಯುವ ಕಾಂಗ್ರೇಸ್ ಸಮಾವೇಶಗಳು ವಿವಿಧ ರೀತಿಯ ಶಿಬಿರಗಳು ಮಹಾತ್ಮ ಗಾಂಧಿಜಿ, ದಿ. ಶ್ರೀಮತಿ ಇಂದಿರಾಗಾಂಧಿ ಮತ್ತು ದಿ. ರಾಜೀವಗಾಂಧಿಯವರ ಜನ್ಮ ದಿನಾಚಾರಣೆ, ಪುಣ್ಯತಿಥಿಗಳ ಅಂಗವಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಹಾಗೂ ಎಲ್ಲ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದಾರೆ ಹಾಗೂ ಇವರು ಕರ್ನಾಟಕ ಸರಕಾರದ ತುಂಗಭದ್ರಾ ಕಾಡಾ ಯೋಜನೆ ಮುನಿರಾಬಾದ ಇದರ ಸದಸ್ಯರಾಗಿ 5 ವರ್ಷಗಳವರೆಗೆ ಸೇವೆ ಸಲ್ಲಿಸಿದ್ದು ಹಾಗೂ ಸರ್ಕಾರದ ಕರ್ನಾಟಕ ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿಯ ಸದಸ್ಯರಾಗಿ ಈ ಭಾಗದ ಒಳನಾಡು ಮೀನುಗಾರರ ಏಳಿಗೆಗಾಗಿ ಹಲವಾರು ಅಭಿವೃದ್ಧಿ ಕಾರ್ಯ ನಿರ್ವಹಿಸಿದ್ದಾರೆ ಹೀಗಾಗಿ ಕಂಗನೊಳ್ಳಿ ಅವರನ್ನು ಕರ್ನಾಟಕ ವಿಧಾನಪರಿಷತ್ತಿಗೆ ಆಯ್ಕೆ ಮಾಡಬೇಕು ಎಂದರು.

ಈ ಬಗ್ಗೆ ಅವರು ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ ಗಾಂಧಿ, ಮುಖ್ಯಮಂತ್ರಿ ಸಿದ್ರಾಮಯ್ಯ ಉಪ ಮುಖ್ಯಮಂತ್ರಿ ಹಾಗೂ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವುಕುಮಾರ ಹಾಗೂ ರಾಜ್ಯದ ಗೃಹ ಮಂತ್ರಿಗಳು ಹಾಗೂ ಕೆ.ಪಿ.ಸಿ.ಸಿ. ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಲ್ಲಿ ಮುಸ್ಲಿಂ ಸಮಾಜದ ಪರವಾಗಿ ಮನವಿ ಮಾಡಿಕೊಂಡರು. ಸಮೀವುಲ್ಲಾ ಮಲ್ಲಾಪುರ ಮಾತನಾಡಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಜಾವೀದ ಬೇಪಾರಿ, ಅಮೀನ ಮನಗೂಳಿ ಇದ್ದರು.

LEAVE A REPLY

Please enter your comment!
Please enter your name here