spot_img
spot_img

ಗೋವುಗಳ ಬಗ್ಗೆ ಜನ ಜಾಗೃತಿ ಅಗತ್ತ – ಸರ್ವೋತ್ತಮ ಜಾರಕಿಹೊಳಿ

Must Read

ಮೂಡಲಗಿ: ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳ ಮಹತ್ವ ಮತ್ತು ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಯುವನಾಯಕ ಸರ್ವೊತ್ತಮ ಜಾರಕಿಹೊಳಿ ಹೇಳಿದರು.

ಅವರು ಪಟ್ಟಣದ ಮಾರುತಿ ದೇವಸ್ಥಾನದಲ್ಲಿ ಸರಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಬಲಿಪಾಡ್ಯ ದಿನದಂದು ಗೋಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗೋಪೂಜೆ ಮಾಡುವುದರಿಂದ ಗೋವಿಗೆ ನಾವು ನೀಡುವ ಮಹತ್ವ ಗೊತ್ತಾಗುವುದು. ಸಾಕಷ್ಟು ಉಪಯೋಗವಿರುವ ಉಪಯುಕ್ತ ಹಾಗೂ ಅದರ ಗುಣ ಸ್ವಭಾವಗಳು ಮೆಚ್ಚುವಂತದ್ದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷ ಹಣಮಂತ ಗುಡ್ಲಮನಿ, ತಹಶಿಲ್ದಾರ ಡಿ.ಜಿ ಮಹಾತ್, ಶಾಸಕರ ಆಪ್ತ ಸಹಾಯಕರಾದ  ನಾಗಪ್ಪ ಶೇಖರಗೋಳ, ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ರವಿ ಸೊನವಾಲಕರ, ಗೀರಿಶ್ ಡವಳೆಶ್ವರ, ಮಹಾದೇವ ಶೆಕ್ಕಿ, ಡಾ. ಎಸ್.ಎಸ್ ಪಾಟೀಲ, ಸಚೀನ ಸೊನವಾಲಕರ, ರಮೇಶ ಸಣ್ಣಕ್ಕಿ, ಭಿಮಪ್ಪಾ ಸೊನವಾಲಕರ ಪುರಸಭೆ ಸದಸ್ಯರಾದ ಶಿವು ಚಂಡಕಿ, ಪ್ರಕಾಶ ಮಾದರ, ಸಿದ್ದಪ್ಪಾ ಮಗದುಮ, ಹಣಮಂತ ಪೂಜೆರಿ, ಪ್ರಕಾಶ್ ಮುಗಳಖೊಡ, ಸಿದ್ದು ಗಡ್ಡೆಕಾರ, ಆನಂದ ಟಪಾಲ, ಚಿದಾನಂದ ಮುಗಳಖೊಡ, ಶಂಕರ ಶಾಬನ್ನವರ ಮತ್ತಿತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!