spot_img
spot_img

ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳು; ದೂರು ದಾಖಲು

Must Read

ಬೀದರ – ವಿವಾದಿತ ಪೀರ ಪಾಶಾ ದರ್ಗಾದಲ್ಲಿ ವಿಡಿಯೋ ಶೂಟ್ ಮಾಡಿ ನಿಜ ಸಂಗತಿ ವರದಿ ಮಾಡಲು ಹೋಗಿದ್ಧ ನ್ಯೂಜ್ ೧೮ ಪತ್ರಕರ್ತರ ಮೇಲೆ ಕೆಲವು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಲು ಯತ್ನಿಸಿದ ಘಟನೆ ಜರುಗಿದೆ.

ಈ ಬಗ್ಗೆ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಮನಸಾಬ ಹೊಸಮನಿ, ನಾಗಪ್ಪ ಮಾಲಿ ಪಾಟೀಲ ಹಾಗೂ ಛಾಯಾಗ್ರಾಹಕ ಮಲ್ಲನಗೌಡ ಸೇರಿ ದಿ.೨೭ ರಂದು ಪೀರ ಪಾಶಾ ದರ್ಗಾದಲ್ಲಿ ನಿಜಸಂಗತಿ ವರದಿ ಮಾಡುವ ಸಲುವಾಗಿ ವಿಡಯೋ ಶೂಟ್ ಮಾಡುವಾಗ ಆರೋಪಿಗಳಾದ ಎಸ್ ಎಮ್ ಅಬ್ರಾರ ಹುಸೇನ ಖಾನ್ ಹಾಗೂ ಎಸ ಎಮ್ ಅಸ್ರಾರ ಹುಸೇನ್ ಖಾನ್ ಎಂಬುವವರ ಜೊತೆ ಸುಮಾರು ೮-೧೦ ಜನ ಸೇರಿಕೊಂಡು ನಮ್ಮ ಮೇಲೆ ಹಲ್ಲೆ ಮಾಡಿ ನಮ್ಮ ಕ್ಯಾಮರಾಗಳನ್ನು ಒಡೆದು ಹಾಕಿದ್ದಾರೆಂಬುದಾಗಿ ದೂರು ನೀಡಿದ್ದಾರೆ.

ಅಲ್ಲದೆ ಈ ದುಷ್ಕರ್ಮಿಗಳು ವರದಿಗಾರರನ್ನು ಸುಮಾರು ಎರಡು ಗಂಟೆಗಳ ಕಾಲ ಒಂದೇ ಕಡೆ ಕೂಡಿ ಹಾಕಿ ಜೀವ ಬೆದರಿಕೆ ಹಾಕಿದ್ದಾರೆಂದೂ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಬಸವಕಲ್ಯಾಣ ಪೊಲೀಸರು ದೂರು ದಾಖಲಿಸಿಕೊಂಡು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್. ಅಶೋಕ ಅವರು, ನೈಜ ಘಟನೆಯ ವಿವರ ವರದಿ ಮಾಡಲು ಹೋದ ವರದಿಗಾರರ ಮೇಲೆ ಹಲ್ಲೆ ಮಾಡಿದ್ದು ಖಂಡನೀಯ.

ಈ ಬಗ್ಗೆ ಕಠಿಣ ಕ್ರಮ ಜರುಗಿಸಲು ಜಿಲ್ಲಾ ವರಿಷ್ಠರಿಗೆ ಸೂಚನೆ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಸಚಿವ ಪ್ರಭು ಚವ್ಹಾಣ ಕೂಡ ಇದ್ದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!