Homeಸುದ್ದಿಗಳುಪ್ರೊ. ಭೀಮರಾಯ ಬಿರಾದಾರರಿಗೆ ಪಿಎಚ್ ಡಿ

ಪ್ರೊ. ಭೀಮರಾಯ ಬಿರಾದಾರರಿಗೆ ಪಿಎಚ್ ಡಿ

ಸಿಂದಗಿ : ಪಟ್ಟಣದ ಪ್ರೊ. ಭೀಮರಾಯ ರುದ್ರಗೌಡ ಬಿರಾದಾರ ಇವರಿಗೆ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕರ್ನಾಟಕ ಸುರತ್ಕಲ್ ಮಂಗಳೂರು ವತಿಯಿಂದ ಪಿಎಚ್.ಡಿ ಪದವಿ ನೀಡಿ ಗೌರವಿಸಲಾಗಿದೆ

ರೈತ ಕುಟುಂಬದಲ್ಲಿ ಜನಿಸಿದ ಪ್ರೊ. ಭೀಮರಾಯ ಬಿರಾದಾರ ಅವರು ಭೌತಶಾಸ್ತ್ರ ವಿಷಯದಲ್ಲಿ ಕಾರ್ಬೋನಾಸಿಯಸ್ ಮಟೀರಿಯಲ್ಸ್ ಮೆಟಲ್ ಆಕ್ಸೆಡ್ ಕ್ಲಸ್ಟರ್‌ಯಾಜ ಎಲೆಕ್ಟೊಡ್ ಮಟೀರಿಯಲ್ಸ್ ಫಾರ್ ಎನರ್ಜಿ ಆಂಡ್ ಸೆನ್ಸಿಂಗ್ ಅಪ್ಲಿಕೇಶನ್ಸ್ ಎಂಬ ಭೌತಶಾಸ್ತ್ರ ವಿಷಯದ ಸಂಶೋಧನಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಲಭಿಸಿದೆ. ಈ ಪ್ರಬಂಧಕ್ಕೆ ಡಾ. ಪಾರ್ಥ ಪ್ರತಿಮದಾಸ್ (ಎನ್‌ಐಟಿಕೆ) ಸುರತ್ಕಲ್ ಭೌತಶಾಸ್ತ್ರ ಪ್ರಾಧ್ಯಾಪಕರು ಮಾರ್ಗದರ್ಶನ ಮಾಡಿದ್ದಾರೆ.

ಡಾ. ಭೀಮರಾಯ ಬಿರಾದಾರ ಅವರು ರಾಷ್ಟ್ರ ಮಟ್ಟದ ಹಾಗೂ ರಾಜ್ಯಮಟ್ಟದ ಪರೀಕ್ಷೆಗಳಾದ ನೀಟ್, ಸೆಟ್, ಜೆಆರ್‌ಎಫ್, ಜಿಎಟಿಇ ವೈದ್ಯಕೀಯ, ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆಗಳನ್ನು ಪಾಸಾಗಿ ೨೦೨೦-೨೧ ನೆಯ ಶೈಕ್ಷಣಿಕ ವರ್ಷದಲ್ಲಿ ಇಡೀ ಭಾರತದ ಹತ್ತು ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಏಕೈಕ ವಿದ್ಯಾರ್ಥಿಯಾಗಿ ಆಯ್ಕೆಯಾಗಿದ್ದು ವಿಶೇಷ. ಈಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳಿಯಾಳದಲ್ಲಿ ಭೌತಶಾಸ್ತ್ರ ವಿಷಯದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಸಾಧನೆಗೆ ಪಿ.ಇ.ಎಸ್.ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ಪಿ.ಕರ್ಜಗಿ, ಆಡಳಿತಾಧಿಕಾರಿ ನಿವೃತ್ತ ಪ್ರಾಚಾರ್ಯ ಆಯ್.ಬಿ.ಬಿರಾದಾರ, ಲಾಯನ್ ಕೆ.ಎಚ್.ಸೋಮಾಪೂರ, ಡಾ. ಅಂಬರೀಶ ಬಿರಾದಾರ, ಪ್ರೊ.ಎಸ್.ವೈ.ಬೀಳಗಿ, ಪಿ.ಎಂ.ಮಡಿವಾಳರ್, ಆರ್.ಬಿ.ಗೋಡಕರ್, ಗುರು ಕಡಣಿ, ಡಾ. ಆರ್.ಎಂ.ಪಾಟೀಲ, ಪ್ರೊ. ಬಿ.ಜಿ.ಕಲಶೆಟ್ಟಿ, ಎಚ್.ಎಂ.ಉತ್ನಾಳ, ಲಾಯನ್ಸ್ ಕ್ಲಬಿನ ಸದಸ್ಯರು ಅಭಿನಂದಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group