ಮೂಡಲಗಿ – ತತ್ವಪದಕಾರರು ನಮ್ಮ ನಾಡಿನ ಬಹುದೊಡ್ಡ ಆಸ್ತಿಯಾಗಿದ್ದು ಅವರು ಬರೆದ ಪದಗಳು ಬದುಕಿನ ದಾರಿದೀಪಗಳಾಗಿ ಅನೇಕ ಜನರ ಬಾಳನ್ನು ಬೆಳಗಿವೆ. ಅವರು ಎಲೆಮರೆಯ ಕಾಯಿಯಂತಿದ್ದು ಗುರು ಶಿಷ್ಯ ಪರಂಪರೆಯ ಜೀವಂತ ಉದಾಹರಣೆಯಾಗಿ ಸಮಾನತೆಯ ತತ್ವ ಬೋಧಿಸಿದ ಮಹಾನ್ ಚಿಂತಕರಾಗಿದ್ದಾರೆ ಎಂದು ವಿಜಯನಗರ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕ ಬಡಿಗೇರ ಮೌನೇಶ ಹೇಳಿದರು.
ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಹಾಗೂ ಕನ್ನಡ ವಿಭಾಗದ ವತಿಯಿಂದ ಹಮ್ಮಿಕೊಂಡ ‘ತತ್ವಪದಕಾರರ ತಾತ್ವಿಕತೆಯ ಸ್ವರೂಪ ‘ ಎಂಬ ಆನಲೈನ್ ಗೂಗಲ್ ಮೀಟ್ ಕಾರ್ಯಕ್ರಮದಲ್ಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ತತ್ವಪದಗಳು ತತ್ವ, ಭಜನೆ ಪದ ಎಂದು ಮುಂತಾಗಿ ಕರೆಯುವ ಈ ರಚನೆಗಳು ಜೀವನ ವಿಧಾನದ ಉಪ ಉತ್ಪನ್ನಗಳಾಗಿವೆ ಇಲ್ಲಿ ಮೊದಲು ನಡೆ ಆಮೇಲೆ ನುಡಿ ಇರುತ್ತದೆ ಇವರಿಗೆ ಯಾವುದೇ ಧರ್ಮದ ಜಾತಿಯ ಭಾಷೆಯ ಗಡಿಗಳಿಲ್ಲ, ಅವರದು ಜಾತಿ–ಧರ್ಮದ ಎಲ್ಲೆಗಳನ್ನು ದಾಟಿದ ವಿಶ್ವಮಾನವ ಪ್ರಜ್ಞೆ ಅಂತಹ ಪ್ರಜ್ಞೆಯನ್ನು ನಾವು ನೀವೆಲ್ಲಾ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಕರೆ ನೀಡಿದರು.
ಅಲ್ಲದೇ ಅವರು ನಮ್ಮ ನಾಡಿನ ಪ್ರಸಿದ್ಧ ತತ್ವಪದಕಾರರಾದ ಶಿಶುನಾಳ ಶರೀಫರ ಒಂದು ತತ್ವಪದವನ್ನು ತಮ್ಮ ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡಿ ಸಭಿಕರನ್ನು ರಂಜಿಸಿದರು.
ಪ್ರಾಂಶುಪಾಲರಾದ ಶಾನೂರಕುಮಾರ ಗಾಣಿಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ತತ್ವಪದಗಳು ಸಂಗೀತದ ರಚನೆಗಳಾಗಿದ್ದು ಅವುಗಳನ್ನು ರಾಗಬದ್ಧವಾಗಿ ಹಾಡಿ ಸಂಗೀತಪ್ರಿಯರ ಮನತಣಿಸುವ ಕಾರ್ಯ ಅನೇಕ ಗಾಯಕರಿಂದ ನಡೆಯುತ್ತಿದೆ ಅಲ್ಲದೇ ತತ್ವಪದಕಾರರ ಜೀವನ ವಿಧಾನ ನಮಗೆಲ್ಲಾ ಸ್ಪೂರ್ತಿಯಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಹಿರಿಯ ಅಧ್ಯಾಪಕರಾದ ಶಿವಾನಂದ ಚಂಡಕೆ ಅವರು ಕಾರ್ಯಕ್ರಮ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಬಿ.ಸಿ ಹೆಬ್ಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್. ಸಹಾಯಕ ಪ್ರಾಧ್ಯಾಪಕರುಗಳಾದ ವೀಣಾ ಮೂಗನೂರ, ಶಿವಾನಂದ ಚಂಡಕೆ, ಬಿ.ಎಸ್.ನಾಯಿಕ, ಚೇತನರಾಜ್ ಬಿ, ಸಂಜೀವ ಮದರಖಂಡಿ, ಹಾಲಪ್ಪ ಮಡಿವಾಳರ, ನಿಂಗಪ್ಪ ಸಂಗ್ರೇಜಕೊಪ್ಪ, ಮಹಾದೇವ ಪೋತರಾಜ ಮುಂತಾದವರು ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಶಿವಕುಮಾರ ಕನ್ನಡ ಅಧ್ಯಾಪಕರು ಸಂಯೋಜಿಸಿದ್ದರು. ವಿದ್ಯಾರ್ಥಿಗಳಾದ ತನುಜಾ ದಡ್ಡೀಮನಿ ಸ್ವಾಗತಿಸಿದರು. ಮಾಯಪ್ಪ ಶೇಗುಣಸಿ ನಿರೂಪಿಸಿದರು. ಹೀನಾಕೌಸರ್ ಯಾದವಾಡ ವಂದಿಸಿದರು.