ಬೀದರ್ – ವಿದ್ಯಾರ್ಥಿಗಳ ಪ್ಯಾಂಟ್ ಬಿಚ್ಚಿಸಿ ಓಡಿಸುವ ಅಮಾನವೀಯ ಶಿಕ್ಷೆ ನೀಡುತ್ತಿದ್ದ ದೈಹಿಕ ಶಿಕ್ಷಕನೊಬ್ಬನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ಪ್ರಕರಣ ಜರುಗಿದೆ
ತಾನು ಹೇಳಿದಂತೆ ಕೇಳದೇ ಇದ್ದ ಅಪ್ರಾಪ್ತ ವಿದ್ಯಾರ್ಥಿಗಳ ಪ್ಯಾಂಟ್ ಬಿಚ್ಚಿ ಓಡಿಸಿ ಅಮಾನವೀಯ ಕೃತ್ಯವೆಸಗುತ್ತಿದ್ದ
ದೈಹಿಕ ಶಿಕ್ಷಕ ರಮೇಶ ಎಂಬಾತನ ವಿರುದ್ಧ ದೂರು ದಾಖಲಾಗಿದೆ.
ಈತ ವಿದ್ಯಾರ್ಥಿಗಳನ್ನು ಬೆತ್ತಲೆಗೊಳಿಸಿ ಗ್ರೌಂಡ್ ನಲ್ಲಿ ಓಡಿಸಿದ್ದು ಅಲ್ಲದೆ ವಿದ್ಯಾರ್ಥಿಗಳಿಗೆ ಹಿಂಸೆ ಹಾಗೂ ಅವಾಚ್ಯ ಶಬ್ದದಿಂದ ನಿಂದನೆ ಮಾಡುತ್ತಿದ್ದನೆನ್ನಲಾಗಿದೆ
ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ನಗರೇಶ್ವರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ 15 ದಿನಗಳ ಹಿಂದೆ ನಡೆದಿದ್ದ ಘಟನೆ ಇಂದು ಬೆಳಕಿಗೆ ಬಂದಿದ್ದು ಶಾಲೆ ಮುಗಿದ ಮೇಲೆ ಹೆಚ್ಚುವರಿಯಾಗಿ ಎರಡು ಗಂಟೆ ದೈಹಿಕ ಪಾಠ ಮಾಡುತ್ತಿದ್ದ.
ಶಾಲೆಗೆ ಹುಮ್ನಾಬಾದ್ ಡಿವೈಎಸ್ಪಿ ನ್ಯಾಮೇಗೌಡರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ದೂರಿನನ್ವಯ ಹುಮ್ನಾಬಾದ್ ಪೊಲೀಸರಿಂದ ಶಿಕ್ಷಕನ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ಆರೋಪಿ ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ