spot_img
spot_img

ಮುರುಗಮ್ಮ ಸುಣಗಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಲೋಕದ ಪೈ 22/7 ದಿನ ಆಚರಣೆ

Must Read

ಸಿಂದಗಿ: ಮೂಲ ಪೈ ದಿನಾಚರಣೆಯನ್ನು ಮಾರ್ಚ್ 14 ಕ್ಕೆ ಆಚರಿಸಿದರೆ ಈ ದಿನ 7ನೇ ತಿಂಗಳು 22 ನೇ ತಾರೀಕು ಇರುವ ಕಾರಣ ಪೈ ಮಹತ್ವವನ್ನು ತಿಳಿಸಲು ಶಾಲೆಯಲ್ಲಿ ಪೈ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಗಣಿತ ಶಿಕ್ಷಕಿ ಶ್ರೀಮತಿ ಸಂಗೀತ ಕೆ. ಮಾತನಾಡಿ, ಗಣಿತ ಲೋಕದಲ್ಲಿ ಗಮನ ಸೆಳೆಯುವ ಕೆಲವು ವಿಶಿಷ್ಟ ಅಂಶಗಳಲ್ಲಿ ‘ಪೈಗೆ ಮಹತ್ವದ ಸ್ಥಾನವಿದೆ. 22/7 ಎಂಬ ಮೇಲ್ನೋಟಕ್ಕೆ ಅತ್ಯಂತ ಸರಳ ಎಂದೆನಿಸುವ ಈ ಭಿನ್ನರಾಶಿಯ ಆಳ ಹಾಗೂ ಅಗಲ ಬೃಹತ್ತಾದುದು. ಅದರ ಸಂಖ್ಯಾ ಅಭಿವ್ಯಕ್ತಿಯಾದ 22/7 ಯನ್ನು ಭಾಗಿಸುತ್ತಾ ಹೋದರೆ ಅದು ಹಾಗೆ ಮುಂದುವರಿಯುತ್ತಾ ಹೋಗುತ್ತದೆ ಹೊರತು ಸಂಪೂರ್ಣವಾಗಿ ಭಾಗವಾಗಿ ಹೋಗುವುದಿಲ್ಲ. ಅದರ ಆರಂಭದ ಸಂಖ್ಯೆಗಳು ಹತ್ತಿರದ ಸ್ಥಾನದ ಸರಾಸರಿಯ ಲೆಕ್ಕಾಚಾರದಲ್ಲಿ ಅದನ್ನು 3.14159 ಎಂದು ಗುರುತಿಸಬಹುದಾಗಿದೆ ಎಂದರು.

ಗಣಿತ ಲ್ಯಾಬ್ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎಸ್ ಹರನಾಳ ಮಾತನಾಡಿ, ಸಿಂದಗಿ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ವಿನೂತನ ಕಾರ್ಯಕ್ರಮಗಳಿಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು ಹಾಗೂ ಗಣಿತದ ವಿಸ್ಮಯಗಳನ್ನು ಅರಿಯಲು ಮಕ್ಕಳಗೆ ಹೇಳಿ ಎನ್‍ಎಮ್‍ಎಮ್‍ಎಸ್ ಮತ್ತು ಎನ್‍ಟಿಎಸ್‍ಇ ಪರೀಕ್ಷೆಗಳಲ್ಲಿ ಭಾಗವಹಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಗಣಿತ ಲ್ಯಾಬ್ ನಲ್ಲಿ ಒಂದು ವೃತ್ತದ ಸುತ್ತಳತೆ ಹಾಗೂ ತ್ರಿಜ್ಯದ ನಡುವಿನ ಅನುಪಾತವನ್ನು ‘ಪೈ ಎಂದು ಕರೆಯಲಾಗುತ್ತದೆ ಎಂದು ಸಾರುವ ಹಲವಾರು ಬೋಧನೋಪಕರಣಗಳನ್ನು ಅಳವಡಿಸಲಾಗಿತ್ತು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಶಿವಾನಂದ ಶಾಪುರ್ ಮಾತನಾಡಿ, ಮಕ್ಕಳಿಗೆ ವಿವಿಧ ಕಾರ್ಯಕ್ರಮಗಳನ್ನು ಮತ್ತು ಎಲ್ಲಾ ವಿಷಯಗಳ ಲ್ಯಾಬ್ ಗಳನ್ನು ಮಾಡೋ ಉದ್ದೇಶ ಮಕ್ಕಳಲ್ಲಿ ಆಯ ವಿಷಯಗಳ ಆಳವಾದ ಜ್ಞಾನ ನೀಡುವುದಾಗಿದೆ ಇದರ ಉಪಯೋಗ ಮಕ್ಕಳು ಪಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕು.ದಾನಮ್ಮ ಚೌಹಾಣ್ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಹಿರಿಯ ಶಿಕ್ಷಕ ಎಸ್ ಎಸ್ ಅವಟಿ ಸ್ವಾಗತಿಸಿದರು. ಬಿ ಎಡ್ ಪ್ರಶಿಕ್ಷಣಾರ್ಥಿಗಳು ನಿರೂಪಿಸಿದರು. ದೈಹಿಕ ಶಿಕ್ಷಕಿ ಶೋಭಾ ಕೋಳೆಕರ್ ವಂದಿಸಿದರು.

ಪ್ರಶಿಕ್ಷಣಾರ್ಥಿಗಳು ಶಿಕ್ಷಕರಾದ ತೋಟಪ್ಪ ಪೂಜಾರಿ, ಗೀತಾ ಅಥಣಿ ಹಾಗೂ 8 9 10ನೇ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಿತ್ಯ ಪಂಚಾಂಗ

ಓಂ ಅಮೂರ್ತಕಾಯ ನಮಃ ಶುಭೋದಯ ಶುಭಕೃತುನಾಮ ಸಂವತ್ಸರ ದಕ್ಷಿಣಾಯಣ ವರ್ಷ ಋತು ಶ್ರಾವಣ ಮಾಸ ಕೃಷ್ಣ ಪಕ್ಷ ಸಪ್ತಮಿ ತಿಥಿ 21.20 ಕ್ಕೆ ಅಂತ್ಯ ಅಷ್ಟಮಿ...
- Advertisement -

More Articles Like This

- Advertisement -
close
error: Content is protected !!