spot_img
spot_img

ಪ್ರತಿದಿನ ಗಿಡ ನೆಟ್ಟು ಪರಿಸರ ಪ್ರೇಮಿಯಾಗಬೇಕು – ಶಿವಮೂರ್ತಿ ಶ್ರೀಗಳು

Must Read

spot_img
- Advertisement -

ರಾಮದುರ್ಗ : ಜೂನ್ ತಿಂಗಳಲ್ಲಿ ಶಾಲೆಗಳಲ್ಲಿ ಸೇರಿದಂತೆ ಹಲವೆಡೆ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿ ಕೇವಲ ದಿನಾಚರಣೆ ಮತ್ತು ಭಾಷಣಕ್ಕೆ ಮಾತ್ರವೇ ಸೀಮಿತವಾಗಿದೆ. ಆದರೆ ಜೂನ್ ತಿಂಗಳಲ್ಲಿ ಮಾತ್ರ ಗಿಡ ನೆಡುವ ಮೂಲಕ ಪರಿಸರ ಪ್ರೇಮಿ ಎನಿಸಿಕೊಳ್ಳುವ ಬದಲು ಪ್ರತಿದಿನ ಸಸಿ ನೆಟ್ಟು ಪರಿಸರ ಪ್ರೇಮಿಯಾಗಬೇಕು ಎಂದು ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಅವರಾದಿ ಗ್ರಾಮದ ಶ್ರೀ ಫಲಾಹಾರ ಶಿವಯೋಗೀಶ್ವರ ಸಂಸ್ಥಾನ ಮಠದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ರಾಮದುರ್ಗ ತಾಲೂಕಾ ಘಟಕ ಹಾಗೂ ಶ್ರೀ ಮೃತ್ಯುಂಜಯ ಯುವಕ ಮಂಡಳಿಯ ಸಹಯೋಗದಲ್ಲಿ ಮೃತ್ಯುಂಜಯ ಮಹಾಸ್ವಾಮಿಗಳ ಏಳನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಆಯೋಜಿಸಿರುವ ಕೋಟಿ ವೃಕ್ಷ ಆಂದೋಲನ ಮತ್ತು ವೃಕ್ಷ ದೀಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಜನರು ಮರಗಳನ್ನು ಹೆಚ್ಚಾಗಿ ಪಿಠೋಪಕರಣಗಳಿಗಾಗಿ ಹಾಗೂ ಗೃಹ ಬಳಕೆಗಾಗಿ ಕಡಿಯುತ್ತಿದ್ದು, ಮರಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ. ಇದರಿಂದ ಪರಿಶುದ್ದಗಾಳಿ ದೊರೆಯುವುದು ಕೂಡಾ ಕಷ್ಟವಾಗುವ ಪರಿಸ್ಥಿತಿ ಎದುರಾಗಿದೆ. ಇನ್ನೂ ಮಳೆಬೆಳೆಯೂ ಕಡಿಮೆ ಆಗಿರುವುದನ್ನು ಗಮನಿಸಬಹುದು, ಇದಕ್ಕೆ ಮೂಲ ಕಾರಣ ಪರಿಸರ ಸಂರಕ್ಷಣೆಯನ್ನು ಮಾಡದಿರುವುದು ಹಾಗೂ ಮರಗಳನ್ನು ಬೆಳೆಸಲು ಸಹಕರಿಸದೇ ಇರುವುದು ಮತ್ತು ಪಾಲನೆ ಪೋಷಣೆಯ ಕೊರತೆ ಉಂಟಾಗಿದೆ ಎಂದರು.

ರಾಜ್ಯ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಮಾತನಾಡಿ, ಶ್ರೀಗಳ ಮಾರ್ಗದರ್ಶದಲ್ಲಿ ಹಮ್ಮಿಕೊಂಡಿರುವ ಕೋಟಿ ವೃಕ್ಷ ಆಂದೋಲನ ಮತ್ತು ವೃಕ್ಷ ದೀಕ್ಷಾ ಕಾರ್ಯಕ್ರಮ ಮೂಲಕ ಇಡೀ ಅವರಾದಿ ಗ್ರಾಮದಲ್ಲಿ ಸಸಿ ನೆಡುವ ಯೋಜನೆಗೆ ಸಾಂಕೇತಿಕವಾಗಿ ಎರಡನೂರು ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

- Advertisement -

ಈ ಕಾರ್ಯಕ್ರಮ ಮೂಲಕ ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಮೂಲಕ ನಮ್ಮ ಜೀವನದಲ್ಲಿ ಪರಿಸರದ ಪಾತ್ರವು ಬಹುಮುಖ್ಯವಾಗಿದೆ, ಪರಿಸರವನ್ನು ಉಳಿಸುವುದು ಪತ್ರಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಪರಿಸರ ಪ್ರೇಮಿ ಶಂಕರ ಎಸ್ ದಾಸನ್ನವರ ಮಾತನಾಡಿ, ಇಂದಿನ ಕಾಂಕ್ರೀಟ್ ಯುಗದಲ್ಲಿ ಅರಣ್ಯ ಸಂಪತ್ತು ನಾಶವಾಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಮನೆಗೆ ಎರಡು ಮಕ್ಕಳು ಸಾಕಾದರೇ ಒಂದು ಮನೆಗೆ ಸಾವಿರಾರು ಮರಗಳು ಬೇಕು. ಆದರಿಂದ ಪ್ರತಿಯೊಬ್ಬರು ಒಂದೊoದು ಸಸಿಗಳನ್ನು ನೆಡುವುದು ಬಹಳ ಅವಶ್ಯವಾಗಿದೆ ಎಂದರು.

ರಾಮದುರ್ಗ ತಾಲೂಕಿನ ತಾಪಂ ಕಾರ್ಯನಿರ್ವಾಹಕರಾದ ಮುರಳಿಧರ ದೇಶಪಾಂಡೆ ಮಾತನಾಡಿ, ರಾಮದುರ್ಗ ತಾಲೂಕಿನಾದ್ಯಂತ 45000 ಸಸಿಗಳನ್ನು ನೆಡುವ ಯೋಜನೆಯನ್ನು ರೂಪಿಸಲಾಗಿದೆ. ಅದರ ಪಾಲನೆ ಪೋಷಣೆಗಾಗಿ ಸಿಬ್ಬಂದಿಗಳನ್ನು ಕೂಡಾ ನೇಮಿಸಲಾಗಿದೆ, ಶ್ರೀಗಳ ಮಾರ್ಗದರ್ಶನದಲ್ಲಿ ನೆಡುವ ಸಸಿಗಳ ಪಾಲನೆ ಪೋಷಣೆಯನ್ನು ಗ್ರಾಮದ ಜನರು ಸ್ವಯಂ ಸೇವಕರಾಗಿ ಬೆಳೆಸಿ ಅವರಾದಿ ಗ್ರಾಮವನ್ನು ಒಂದು ಒಳ್ಳೆಯ ಪರಿಸರ ಗ್ರಾಮವನ್ನಾಗಿ ಮಾಡಬೇಕೆಂದು ಹೇಳಿದರು.

ಇದೇ ವೇಳೆ ರಾಜ್ಯ ಪ್ರಶಸ್ತಿ ವಿಜೇತ ಸಿದ್ದಣ್ಣ ದುರದುಂಡಿ ಹಾಗೂ ಪರಿಸರಪ್ರೇಮಿ ಶಂಕರ ದಾಸನ್ನವರರಿಗೆ ಶ್ರೀಗಳ ಸಂಸ್ಥಾನ ಮಠದಿಂದ ವೃಕ್ಷಋಷಿ ಪ್ರಶಸ್ತಿ ಪ್ರದಾನ ಮಾಡಿ ಸತ್ಕರಿಸಿ ಗೌರವಿಸಿದರು.

- Advertisement -

ಈ ಸಂದರ್ಭದಲ್ಲಿ ಕೃಷಿ ಸಹಾಯಕ ನಿರ್ದೇಶಕ ಎಸ್.ಎಸ್.ಬೆಳವಟಿಗಿ, ತೋಟಗಾರಿಕೆ ಸಹಾಯಕ ಹಣಮಂತ ಹುಕ್ಕೇರಿ, ಉಪವಲಯ ಅರಣ್ಯ ಅಧಿಕಾರಿ ಎನ್.ಎಮ್.ಯಲಿಗಾರ, ತಾಪಂ ಸದಸ್ಯ ಎಸ್.ಎಸ್. ಮೇಟಿ, ಪತ್ರಕರ್ತರಾದ ಕೃಷ್ಣ ಗಿರೆನ್ನವರ, ಮಲ್ಲು ಬೋಳನವರ, ಹಣಮಂತ ಕಂಕವಾಡಿ, ಸುರೇಶ ಪಾಟೀಲ ಹಾಗೂ ಸಿ.ಎಮ್. ಕುಲಕರ್ಣಿ, ಎಲ್.ಎಸ್. ಪಲ್ಲೇದ, ಎಮ್.ಎಮ್. ವಾಘ್ಮೋಡೆ, ಎಸ್.ಎಸ್. ಹವಾಲ್ದಾರ, ಎಮ್.ಜಿ. ಹಿರೇಮಠ, ಸಿದ್ದಪ್ಪ ಕಟ್ಟೇಕಾರ, ಬಿ,ಎಸ್, ಕುಲಕರ್ಣಿ, ಬಸವರಾಜ ಕಮ್ಮಾರ, ಸಂಗಪ್ಪ ಪೂಜಾರ, ಕಲಾವಿದ ಮಾರುತಿ ಪ್ಯಾಟಿ, ಯುವ ಸಂಘಗಳ ಒಕ್ಕೂಟದ ರಾಮದುರ್ಗ ತಾಲೂಕಾಧ್ಯಕ್ಷ ಸಂಗಮೇಶ ಪೂಜೇರಿ, ರವಿ ಗಡದೆ, ಎಸ್.ಎಮ್. ಯಲಿಗಾರ ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group