ಸ್ವಾಭಾವಿಕ ಆಮ್ಲಜನಕಕ್ಕೆ ಗಿಡಮರಗಳನ್ನು ಬೆಳೆಸಬೇಕು – ಸಿಂತಿಯಾ ಡಿ, ಮೆಲ್ಲೋ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಸಿಂದಗಿ: ರುದ್ರ ಭೂಮಿಯಲ್ಲಿ ಮರಗಳನ್ನು ನೆಡುವ ಮೂಲಕ ಪರಿಸರ ರಕ್ಷಿಸುವ ಕಾರ್ಯಕ್ಕೆ ಮುಂದಾಗಿರುವ “ವಿಶ್ವ ಬಂಧು ಪರಿಸರ ಬಳಗ”ದ ಕಾರ್ಯ ಶ್ಲಾಘನೀಯ. ಪರಿಸರ ಜಾಗೃತಿಯ ಜೊತೆಗೆ ಸ್ಮಶಾನ ಅಭಿವೃಧ್ದಿಯ ಕಾಯಕಲ್ಪಕ್ಕೂ ವೇದಿಕೆ ಸಿಕ್ಕಂತಾಗಿದೆ ಎಂದು ಪುರಸಭೆಯ ಮಾಜಿ ಸದಸ್ಯ ರಾಜಶೇಖರ್ ಕೂಚಬಾಳ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಮಲಘಾಣ ರಸ್ತೆಯಲ್ಲಿರುವ ಭೋವಿ, ಯಾದವ, ಕೊರಮ ಸಮಾಜಗಳ ಸ್ಮಶಾನದಲ್ಲಿ ವಿಶ್ವ ಬಂಧು ಪರಿಸರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಹಸಿರು ಪರಿಸರ ಆಂದೋಲನದ ನಾಲ್ಕನೇ ವಾರ, ರುದ್ರ ಭೂಮಿಯಲ್ಲಿ ಸಸಿಗೆ ನೀರೆರೆದು ಅವರು ಮಾತನಾಡಿ, ಪರಿಸರ ವಿನಾಶದಿಂದ ಸಾಕಷ್ಟು ದುಷ್ಪರಿಣಾಮಗಳಾಗುತ್ತಿವೆ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮುಂದೆ ಖಾಲಿ ಇರುವ ಜಾಗಗಳಲ್ಲಿ ಸಾಧ್ಯವಾದಷ್ಟು ಗಿಡ, ಮರಗಳನ್ನು ನೆಡಬೇಕು ಎಂದು ಸಲಹೆ ನೀಡಿದರು.

ಸಂಗಮ ಸಂಸ್ಥೆಯ ನಿರ್ದೇಶಕಿ ಸಿಂತಿಯಾ ಡಿ,ಮೇಲೊ ಮಾತನಾಡಿ, ಒಬ್ಬ ಹೆಣ್ಣು ಮಗಳು, ಅದು ಅನಕ್ಷರಸ್ತ ಮಹಿಳೆ, ಸಾಲು ಮರದ ತಿಮ್ಮಕ್ಕ ಮಾಡಿದ ಸಾಧನೆ ನಮಗೆಲ್ಲಾ ಮಾದರಿ. ಅದನ್ನು ಅನುಸರಿಸಿಕೊಂಡು ಹೋಗಬೇಕು. ಕೋವಿಡ್-19 ಸಮಯದಲ್ಲಿ ಆಮ್ಲಜನಕದ ಕೊರತೆ ನಾವೆಲ್ಲಾ ಅನುಭವಿಸಿದ್ದೇವೆ. ಅದರ ಕೊರತೆ ನೀಗಿಸಲು ಸ್ವಾಭಾವಿಕ ಆಮ್ಲಜನಕ ಹೊರಬರಬೇಕಾದರೆ ಗಿಡ ಮರಗಳನ್ನು ನೆಟ್ಟು ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದು ವಿನಂತಿಸಿಕೊಂಡರು.

- Advertisement -

ವಿಶ್ವ ಬಂಧು ಪರಿಸರ ಬಳಗದ ಸಂಚಾಲಕ, ಪತ್ರಕರ್ತ ಸಂಘದ ಅಧ್ಯಕ್ಷ ಆನಂದ ಶಾಬಾದಿ ಮಾತನಾಡಿ, ಹಸಿರು, ಉಸಿರು ಒಂದೇ ನಾಣ್ಯದ ಎರಡು ಮುಖಗಳು. ಹಸಿರಿಲ್ಲದಿದ್ದರೆ ಉಸಿರಿಲ್ಲ. ಗಿಡ ಮರಗಳನ್ನು ನೆಟ್ಟರೆ ಸಾಲದು ಅವುಗಳಿಗೆ ಪೋಷಣೆ ಮಾಡುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಶ್ವ ಬಂಧು ಪರಿಸರ ಬಳಗದ ಸಂಚಾಲಕ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಸಿದ್ಧಲಿಂಗ ಬ ಚೌಧರಿ, ವರ್ಷದ 52 ವಾರಗಳಲ್ಲೂ ಪ್ರತೀ ರವಿವಾರ ಸಸಿ ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದು ಜೀವಿತಾವಧಿಯವರೆಗೂ ನಿತ್ಯ ನಿರಂತರ ಪ್ರಕ್ರಿಯೆಯಾಗಲು ಪ್ರತಿಯೊಬ್ಬರು ಸಹಕರಿಸಬೇಕು. ವರ್ಷಕ್ಕೊಮ್ಮೆ ನೆಪ ಮಾತ್ರಕ್ಕೆ ಪರಿಸರ ದಿನಾಚರಣೆ ಆಚರಿಸದೆ ದಿನ ನಿತ್ಯವೂ ಅದನ್ನು ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಂಡಿತ ಯಂಪೂರೆ, ರಾಮು ಸಿಂದಗಿ, ರವಿ ನಾಗಠಾಣ, ಪರಶುರಾಮ ಪೂಜಾರಿ, ಪರಶುರಾಮ ಮಣೂರ, ಶಿವರಾಜ ಆಲಮೇಲ, ಸೇರಿದಂತೆ ಪಧಾಧಿಕಾರಿಗಳು ಪಾಲ್ಗೊಂಡಿದ್ದರು. ಕಸಾಪ ಗೌರವ ಕಾರ್ಯದರ್ಶಿ ಬಸವರಾಜ ಅಗಸರ ನಿರೂಪಿಸಿದರು. ಶಿಕ್ಷಕ ಸಾಯಬಣ್ಣ ದೇವರಮನಿ ವಂದಿಸಿದರು.

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!