ಸಿಂದಗಿ: ಕಳೆದ ಒಂದೆರಡು ವರ್ಷಗಳ ಹಿಂದೆ ಪರಿಸರ ವಿಕೋಪದಿಂದ ಶುದ್ಧ ಪರಿಸರ ಸಿಗದೇ ಕರೋನಾ ಎಂಬ ಮಹಾಮಾರಿ ರೋಗಕ್ಕೆ ತುತ್ತಾಗಿ ಹಲವಾರು ಜನರು ಜೀವ ಕಳೆದುಕೊಂಡ ಸನ್ನಿವೇಶ ನೆನೆಸಿಕೊಂಡರೆ ಜೀವ ಕಿತ್ತುಹೋಗುತ್ತದೆ ಅದು ಮರುಕಳಿಸಬಾರದು ಎಂದು ಅರಣ್ಯ ಇಲಾಖೆ ಇಡೀ ದೇಶಾದ್ಯಂತ ಸಸಿ ನೆಡುವ ಆಂದೋಲವನ್ನೆ ಹಮ್ಮಿಕೊಂಡು ಊರಿಗೊಂದು ವನ ಮನೆಗೊಂದು ಸಸಿ ನೆಡುವಂತೆ ಆದೇಶ ಜಾರಿ ಮಾಡಿತು ಚುರುಕಾದ ಅರಣ್ಯ ಇಲಾಖೆ ಅರಣ್ಯ ಬೆಳವಣಿಗೆ ಪ್ರಮುಖ ಪಾತ್ರ ವಹಿಸಿತು ಆದರೆ ತಹಶೀಲ್ದಾರರು ಪ್ರತಿನಿತ್ಯ ಸಂಚರಿಸುವ ಭಾಗದಲ್ಲಿ ನೆಟ್ಟ ಸಸಿ ಆಶ್ರಯ ವಿಲ್ಲದೆ ಬಿದ್ದರು ಕೂಡಾ ಅದರ ರಕ್ಷಣೆಗೆ ನಿಗಾ ವಹಿಸದಿರುವುದು ವಿಶ್ವ ಪರಿಸರ ದಿನಾಚಣೆಗೆ ಅವಮಾನ ಮಾಡಿದಂತಾಗಿದೆ
ಹೌದು, ಬಿಸಿಲು ತಣಿಸಲು ಸಾರ್ವಜನಿಕರಿಗೆ ತಂಪಿನ ಮುದ ನೀಡಲೆಂದು ಪಟ್ಟಣದ ಮಿನಿಸೌಧದ ಆವರಣದಲ್ಲಿ ಅನೇಕ ತರಹದ ಸಸಿಗಳನ್ನು ನೆಡಸಲಾಗಿದೆ ಆದರೆ ಕೆಲವೊಂದು ಚಿಗುರಿವೆ ಇನ್ನು ಕೆಲವೊಂದು ನಲುಗಿವೆ ಬಿಸಿಲಿನ ಬೆಗೆಯನ್ನು ತಣಿಸಲು ಅರಣ್ಯ ಅಧಿಕಾರಿಗಳೊ ಅಥವಾ ಪರಿಸರ ಪ್ರೇಮಿಗಳೊ ಇಲ್ಲಿ ಅನೇಕ ತರಹದ ಸಸಿಗಳನ್ನು ನೆಡಲಾಗಿದೆ ಆದರೆ ಅವುಗಳ ಸಂರಕ್ಷಣೆ ಯಾವೊಬ್ಬ ಅಧಿಕಾರಿಗಳೂ ಮುಂದಾಗಿಲ್ಲ ಇದರಿಂದ ಪರಿಸರ ದಿನಾಚರಣೆ ಆಚರಣೆಗೆ ಮಾತ್ರ ಸಿಮೀತವಾದಂತಾಗಿದೆ.
ಆರೋಪ:
ನಾವು ಕಂಡಂತೆ ಸಸಿ ನೆಟ್ಟ ಬಳಿಕ ಒಂದು ದಿನವು ಸಸಿಗಳಿಗೆ ನೀರು ಹಾಕಿದ್ದು ನಾವು ಕಂಡಿಲ್ಲ ಎನ್ನುತ್ತಾರೆ ಸ್ಥಳೀಕರು. ಇಲ್ಲಿ ಬರುವವರು ರೈತಾಪಿ ಜನರು ಬಿದ್ದ ಸಸಿಯನ್ನು ಒಂದು ಬಾರಿ ಅದಕ್ಕೆ ಬಂಟವನ್ನು ನಿಲ್ಲಿಸಿ ಸುತ್ತಲೂ ಕಲ್ಲುಗಳನ್ನು ಇಟ್ಟು ಬಿದ್ದ ಸಸಿಗೆ ಆರೈಕೆ ಮಾಡಬಹುದು ಆದರೆ ಪ್ರತಿ ಬಾರಿ ಅಲ್ಲ ಆದಕಾರಣ ಅಧಿಕಾರಿಗಳಾಗಲಿ ಇನ್ನು ಸ್ಥಳೀಯ ಪರಿಸರ ಪ್ರೇಮಿಗಳಾಗಲಿ ಬಿದ್ದಿರುವ ಸಸಿಯನ್ನು ಮೆಲೆತ್ತಿ ಪೋಷಣೆ ಮಾಡಬೇಕು ಎನ್ನುವದು ಪರಿಸರವಾದಿಗಳ ಆಶಯವಾಗಿದೆ.
ಪರಿಸರ ಮಾಲಿನ್ಯ ಉಂಟಾಗಿದ್ದರಿಂದ ಕರೋನಾದಂಥ ಮಹಾಮಾರಿ ರೋಗಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ ಅದಕ್ಕೆ ಪರಿಸರ ಪ್ರೇಮಿಗಳು ಅದರ ರಕ್ಷಣೆ ಮಾಡಿ ಎನ್ನುವ ಸಂದೇಶ ನೀಡಿದರಿಂದ ಗಿಡ-ಮರಗಳ ನೆಡಲು ಪ್ರಾರಂಭಿಸಿದ್ದೇವೆ ಅದರ ರಕ್ಷಣೆ ಮಾತ್ರ ದಿನಾಚರಣೆಗೆ ಸಿಮಿತಗೊಳಿಸದೇ ನಿತ್ಯ ಅವುಗಳ ರಕ್ಷಣೆಗೆ ಮುಂದಾಗಬೇಕು ಇಲ್ಲದಿದ್ದರೆ ಇಡೀ ರೈತ ಸಮುದಾಯ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ.
ಪೀರು ಕೇರೂರ