spot_img
spot_img

ಮಕ್ಕಳ ಸುಪ್ತ ಪ್ರತಿಭೆ ಹೊರಹಾಕಲು ವೇದಿಕೆ

Must Read

ಸಿಂದಗಿ: ಪ್ರತಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಹೊರತೆಗೆಯಲು ವೇದಿಕೆ ಸಜ್ಜಾಗಿದ್ದು. ಮಕ್ಕಳು ಹಾಡು, ನೃತ್ಯ, ಮಿಮಿಕ್ರಿ ಮುಂತಾದ ವಿಭಾಗಗಳಲ್ಲಿ ಆಸಕ್ತಿ ಅನುಗುಣವಾಗಿ ಭಾಗವಹಿಸುವ ಒಂದು ಸದವಕಾಶ ದೊರೆಕಿಸಿಕೊಟ್ಟಿದೆ ಎಂದು ನಿವೃತ್ತ ದೈಹಿಕ ಶಿಕ್ಷಕ ಎಸ್.ಎಸ್. ಮಲ್ಲೇದ ಹೇಳಿದರು.

ಪಟ್ಟಣದ ಹೊರವಲಯದ ಭೀಮಾ ಯುನಿಸರ್ವಲ್ ಸೆಂಟ್ರಲ್ ಸ್ಕೂಲ್ ಸಿಂದಗಿ ಹಮ್ಮಿಕೊಂಡಿರುವ ಯುವಜನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರತಿ ಮಕ್ಕಳಲ್ಲಿ ಸುಪ್ತವಾದ ಹಾಗೂ ಆಂತರಿಕ ಪ್ರತಿಭೆ ಇರುತ್ತದೆ ಅದನ್ನು ಹೆಕ್ಕಿ ತೆಗೆಯುವ ಕಾರ್ಯದಲ್ಲಿ ತೊಡಗಬೇಕಾಗಿದೆ ಎಂದರು.

ಆದರ್ಶ ಶಾಲೆಯ ಸಹಶಿಕ್ಷಕರಾದ ನಟರಾಜ ಕುಂಬಾರ ಮಾತನಾಡಿ, ಕೋರೋನಾವೆಂಬ ಮಹಾಮಾರಿಯಿಂದ ತತ್ತರಿಸಿ ಆಟ-ಪಾಠಗಳೆಲ್ಲ ಕ್ಷೀಣವಾಗಿದ್ದವು ಈಗ ತಾನೆ ಹೊರಗೆ ಬಂದಿದ್ದೇವೆ ಶಾಲೆಗಳು ಶುರುವಾಗಿವೆಯೆಂಬುದು ನಮಗೆ ಸಂತಸ ಎಂದಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಧ್ಯಕ್ಷ ವಿಠ್ಠಲ ಜಿ. ಕೊಳೂರ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಸ್ಥಾನ ಪಡೆಯುವುದಕ್ಕಿಂತ ಭಾಗವಹಿಸುವುದು ಪ್ರಮುಖವಾಗಿದೆ. ಈ ಭಾವನೆಯನ್ನು ಮಕ್ಕಳಿಗೆ ಮನವರಿಕೆ ಮಾಡಬೇಕು, ಸತತ ಪ್ರಯತ್ನ ಭಾಗವಹಿಸುವಿಕೆಯಿಂದ ಸ್ಪರ್ಧೆಯಲ್ಲಿ ಯಶಸ್ಸು ಪಡೆಯಲು ಸಾಧ್ಯ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಲಾಗುತ್ತಿದೆ ಮಕ್ಕಳು ಪಠ್ಯಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದ್ದಾರೆ ಅವರ ಪ್ರತಿಭೆ ಅನಾವರಣವಾಗುತ್ತಿದೆ ಎಂದರು.

ಪ್ರೊ. ಗೌರೀಶ ಹಯ್ಯಾಳಕರ, ಸಹನಿರ್ದೇಶಕ ಜಿ.ಕೆ. ಪಡಗಾನೂರ, ಪ್ರಶಾಂತ ಕಮತಗಿ, ಭೀಮಾಶಂಕರ ತಾರಾಪುರ, ಶರಣು ಮಾವೂರ,ದತ್ತು ಮಾವೂರ, ಶಾಂತವೀರ ಕುಂಬಾರ, ಶ್ರೀಮಂತ ಮಲೇದ, ಜನಪದ ಹಿರಿಯ ಸಾಹಿತಿ ಡಾ. ಎಂ.ಎಂ. ಪಡಶೆಟ್ಟಿ ಶಾಲೆಯ ಸಯೋಜಕ ರಾಬಿನ್ ಟ್ಯಾನಿ ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ಶಾಲೆಯಲ್ಲಿ ಮಕ್ಕಳು ಸಂಗೀತ, ನೃತ್ಯ, ಮಿಮಿಕ್ರಿ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆ ಅನಾವರಣ ಮಾಡಿದರು. ಶಾಲೆ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡರು.

ಪ್ರಾಚಾರ್ಯ ಎಸ್. ಪಿ. ಶಾಹಿಮೋಲ್ ಸ್ವಾಗತಿಸಿದರು ಅಭಿಷೇಕ್ ಶಿಕ್ಷಕರು ನಿರೂಪಿಸಿದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!