ಮುನವಳ್ಳಿ: ತಾಲೂಕಿನ ಮುನವಳ್ಳಿ ಸರಕಾರಿ ಪ್ರೌಢ ಶಾಲೆಯಲ್ಲಿ ಮುನವಳ್ಳಿ ವಲಯದ ಸಮೂಹ ಸಂಪನ್ಮೂಲ ಕೇಂದ್ರಗಳ ವ್ಯಾಪ್ತಿಯ ವಿಕಲಚೇತನ ಮಕ್ಕಳ ದಾಖಲಾತಿ ಹೊಂದಿದ ಸರಕಾರಿ ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆಯನ್ನು ಜರುಗಿಸಲಾಯಿತು.
ಈ ಸಭೆಯನ್ನು ಉದ್ದೇಶಿಸಿ ಮುನವಳ್ಳಿ ಕೇಂದ್ರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಫ್.ಜಿ.ನವಲಗುಂದ ಮಾತನಾಡಿ, ಎಸ್.ಎ.ಟಿ.ಎಸ್.ನಲ್ಲಿ ಶಾಲಾ ಸೌಲಭ್ಯಗಳ ಕುರಿತು ಜಿಯೋ ಗೆ ಸಂಬಂಧಿಸಿದಂತೆ 29 ಪ್ರಶ್ನೆಗಳಿಗೆ ಉತ್ತರಿಸುವ ಹಾಗೂ ಪೋಟೋ ದಾಖಲಿಸುವ ಕುರಿತು ಮಾಹಿತಿಯನ್ನು ತಿಳಿಸುತ್ತ ನೆಟ್ ವರ್ಕ ಲಭ್ಯವಿರದ ಶಾಲೆಗಳಿಗೆ ಈ ಕಾರ್ಯಪೂರ್ಣಗೊಳಿಸಲು ಸಾಧ್ಯವಾಗದ ಪ್ರಯುಕ್ತ ಎಸ್.ಎ.ಟಿ.ಎಸ್. ತತ್ರಾಂಶದಲ್ಲಿ ಬದಲಾವಣೆ ಮಾಡಿದ್ದು ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರು ಮಾಹಿತಿ ದಾಖಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಕಾರಣ ಎಲ್ಲ ಪ್ರಧಾನ ಗುರುಗಳು ತಮ್ಮ ಶಾಲಾ ಸೌಲಭ್ಯಗಳ ಕುರಿತು 29 ಪ್ರಶ್ನೆಗಳಿಗೆ ಮಾಹಿತಿ ಸರಿಯಾಗಿ ನಮೂದಿಸಿ ದಾಖಲಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ವ್ಹಿ.ಸಿ.ಹಿರೇಮಠ ಮಾತನಾಡಿ, ಕೋರೋನಾ ಸಂದರ್ಭದಲ್ಲಿ ಆರೋಗ್ಯದ ಸುರಕ್ಷತೆಯ ಜೊತೆಗೆ ಇಲಾಖೆಯ ಮಾರ್ಗಸೂಚಿಯಂತೆ ಸುರಕ್ಷಿತ ಅಂತರ ಕಾಯ್ದುಕೊಂಡು ವಿದ್ಯಾಗಮ ಚಟುವಟಿಕೆ ನಡೆಸುವ ಜೊತೆಗೆ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಾಮಾಪನ ಪ್ರಕ್ರಿಯೆ ಜರುಗಿಸಲು ತಿಳಿಸಿದರು.
ವಿಕಲಚೇತನ ಸಂಪನ್ಮೂಲ ಶಿಕ್ಷಕರಾದ ವೈ.ಬಿ.ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿ ವಿಕಲಚೇತನ ಮಕ್ಕಳ ವೈದ್ಯಕೀಯ ಪ್ರಮಾಣಪತ್ರ ಮತ್ತು ಯು.ಡಿ.ಐ.ಡಿ ಕಾರ್ಡ ನೋಂದಣಿಯ ಮಹತ್ವ ಕುರಿತು ಮಾಹಿತಿಯನ್ನು ತಿಳಿಸಿದರು. ಎಂ.ಎಂ.ಸಂಗಮ ಮಾತನಾಡಿ ಐ ಇ ಪಿ ಮತ್ತು ಗೃಹ ಆಧಾರಿತ ಮಕ್ಕಳ ಮಾಹಿತಿ ಕುರಿತು ಸವಿವರವಾದ ಮಾಹಿತಿಯನ್ನು ನೀಡಿದರು.
ಎಸ್.ಬಿ.ಬೆಟ್ಟದ ಮಾತನಾಡಿ ವಿಕಲಚೇತನ ಮಕ್ಕಳಿಗೆ ಸಂಬಂಧಿಸಿದಂತೆ ದಾಖಲಾತಿ ಹಾಜರಾತಿ ” ಶಾಲೆಯಲ್ಲಿ ನಿರ್ವಹಿಸಬೇಕಾದ ದಾಖಲೆಗಳು ” ಕುರಿತು ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಹೂಲಿಕಟ್ಟಿ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಸಿ.ಕುರಿ. ಹೂಲಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ತಿಮ್ಮಯ್ಯ. ಸಿಂದೋಗಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಎಸ್.ವೈ.ನಿಪ್ಪಾಣಿ.ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಎಸ್.ಎನ್.ಜೋಶಿ.ಮಮತಾ ಬಣಕಾರ.ಬಸವರಾಜ ಗಾಣಿಗೇರ.ಎಸ್.ಜಿ.ಕಾಂಬಳೆ.ಎನ್.ಎಂ.ವಾಶಪ್ಪನವರ.. ಮುನವಳ್ಳಿ ಹೂಲಿ ಹೂಲಿಕಟ್ಟಿ.ಸಿಂದೋಗಿ ಅರ್ಟಗಲ್ ವ್ಯಾಪ್ತಿಯ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಈ ಸಭೆಯಲ್ಲಿ ಹಾಜರಿದ್ದರು.
ವಿಕಲಚೇತನ ಸಂಪನ್ಮೂಲ ಶಿಕ್ಷಕರಾದ ಸಿ.ವ್ಹಿ.ಬಾರ್ಕಿ,ಸಿಂದೋಗಿ ,ಮುನವಳ್ಳಿ.ಅರ್ಟಗಲ್.ಹೂಲಿ.ಹೂಲಿಕಟ್ಟಿ ಸಮೂಹ ಸಂಪನ್ಮೂಲ ಕೇಂದ್ರಗಳ ಶಾಲೆಗಳಲ್ಲಿ ದಾಖಲಾಗಿರುವ ವಿಕಲಚೇತನ ಮಕ್ಕಳ ವಿವರಗಳನ್ನು ತಿಳಿಸಿ ವಿಕಲತೆಯ ಸ್ವರೂಪವನ್ನು ವೈದ್ಯಕೀಯ ಪ್ರಮಾಣಪತ್ರದಲ್ಲಿ ದಾಖಲಿರುವಂತೆ ದಾಖಲಿಸಿದ್ದನ್ನು ಖಚಿತಪಡಿಸಿಕೊಳ್ಳಲು ಎಸ್.ಎ.ಟಿ.ಎಸ್.ನಲ್ಲಿ ಸಾಮಾನ್ಯ ಮಕ್ಕಳು ವಿಕಲತೆಯನ್ನು ನಮೂದಾಗಿ ತಪ್ಪಾಗಿ ದಾಖಲಿದ್ದು ಅವುಗಳನ್ನು ಸರಿಪಡಿಸುವಂತೆ ಈ ಸಂದರ್ಭದಲ್ಲಿ ಕರೆ ನೀಡಿದರು..ಕಾರ್ಯಕ್ರಮದ ಪ್ರಾರಂಭದಲ್ಲಿ ವೈ.ಬಿ.ಕಡಕೋಳ ಸ್ವಾಗತಿಸಿದರು.ಕೊನೆಯಲ್ಲಿ ಸಿ.ವ್ಹಿ.ಬಾರ್ಕಿ ವಂದಿಸಿದರು.