spot_img
spot_img

ಕವನ : ಸದೃಢ ಕರ್ನಾಟಕವ ಕಟ್ಟೋಣ

Must Read

spot_img
- Advertisement -

ಸದೃಢ ಕರ್ನಾಟಕವ ಕಟ್ಟೋಣ

ಭವ್ಯ ಕನ್ನಡ ನಾಡನು ಕಟ್ಟೋಣ
ಹುಯಿಲಗೋಳರ ಕನಸು ನನಸಾಗಿಸೋಣ,
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಗೀತೆಯ ಭಕ್ತಿಯಲಿ ಹಾಡೋಣ
ಕನ್ನಡದ ಕಲಿ ಮ.ರಾಮಮೂರ್ತಿ ರೂಪಿಸಿದ
ಕೆಂಪು ಹಳದಿಯ ಕನ್ನಡ ಬಾವುಟಕ್ಕೆ ನಮಿಸೋಣ
ಜೈ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ
ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಹಾಡಿ
ಸುವರ್ಣ ಕರ್ನಾಟಕ ಹಬ್ಬ ಮಾಡೋಣ
ಅಮೃತ ಭಾರತಿಗೆ ಕನ್ನಡದಾರತಿ                        ಬೆಳಗೋಣ..

ಮೂರು ಸಹಸ್ರ ವರ್ಷದ
ಕನ್ನಡ ನಾಡು ನುಡಿಯ ಮಹತ್ವ ಸಾರೋಣ
ಚಿನ್ನ, ಬೆಳ್ಳಿ,ವಜ್ರಗಳ ಅಳೆದು ಮಾರಿದ
ವಿಜಯನಗರದ ವೈಭವವ ಸ್ಮರಿಸೋಣ
ಹೊಯ್ಸಳ ಶಿಲ್ಪಕಲಾ
ಸೌಂದರ್ಯವ ನೆನೆಯೋಣ
ಮೈಸೂರು ಅರಸರ ಜನಪರ
ಆಡಳಿತವ ಶ್ಲಾಘಿಸೋಣ
ಕದಂಬ ವಂಶದ ಮಯೂರ ವರ್ಮನ ಶೌರ್ಯ,
ಆಡಳಿತ,ಕನ್ನಡ ಪ್ರೇಮಕೆ ತಲೆ ಬಾಗೋಣ..

- Advertisement -

ಕನ್ನಡಮ್ಮನ ಹೊನ್ನ ಕಿರೀಟಕೆ
ಜ್ಞಾನಪೀಠದ ಮುತ್ತುಗಳ ತೊಡಿಸಿದ
ಕುವೆಂಪು,ಬೇಂದ್ರೆ,ಕಾರಂತ,ಗೋಕಾಕ್,ಮಾಸ್ತಿ,
ಅನಂತಮೂರ್ತಿ,ಕಂಬಾರ,ಕಾರ್ನಾಡರ
ಕೃತಿಗಳ ಓದೋಣ.
ಅವರ ಸಾಧನೆಗಳ ಸ್ಮರಿಸೋಣ..

ಕನ್ನಡ ತಾಯಿಯ ಮುಡಿಗೆ
ಸರಸ್ವತಿ ಸಮ್ಮಾನ ನೀಡಿದ
ಭೈರಪ್ಪ, ಮೊಯ್ಲಿ,
ಅವರ ಶ್ಲಾಘಿಸೋಣ,
ತಾಯಿ ಭುವನೇಶ್ವರಿಗೆ
ರಾಷ್ಟ್ರಕವಿ ಕಿರೀಟ ತೊಡಿಸಿದ
ಕುವೆಂಪು,ಗೋವಿಂದ ಪೈ,
ಶಿವರುದ್ರಪ್ಪರ ಸಾಹಿತ್ಯ ಓದೋಣ
ಈ ಮಹಾನ್ ಸಾಧಕರಿಗೆ ನಮಿಸೋಣ

ಕರ್ನಾಟಕ ರತ್ನ ಪ್ರಾಯರಾದ
ಕುವೆಂಪು,ಡಾ..ರಾಜ್,ನಿಜಲಿಂಗಪ್ಪ,
ಸಿ ಎನ್ನಾರ್ ರಾವ್,ದೇವಿಪ್ರಸಾದ ಶೆಟ್ಟಿ,
ಭೀಮಸೇನ ಜೋಷಿ,ಶಿವಕುಮಾರ್ ಸ್ವಾಮೀಜಿ,
ದೇಜಗೌ,ವೀರೇಂದ್ರ ಹೆಗಡೆ,
ಪುನೀತರ ಕೊಡುಗೆಗಳ ಸ್ಮರಿಸೋಣ
ಅವರ ಅಮೂಲ್ಯ ಸಾಧನೆಗೆ ನಮಿಸೋಣ..

- Advertisement -

ಪ್ರತಿದಿನ ಪ್ರತಿಕ್ಷಣ ಕನ್ನಡವನ್ನೇ ಬಳಸೋಣ
ಎಳೆಯರಿಗೆ ಕನ್ನಡವನ್ನೇ ಕಲಿಸೋಣ
ಕನ್ನಡ ವಿರೋಧಿಗಳ ಧಿಕ್ಕರಿಸೋಣ
ಕರ್ನಾಟಕ ಸುವರ್ಣ ಮಹೋತ್ಸವದಂದು
ಕನ್ನಡ ನಾಡು ನುಡಿ, ಸಂಸ್ಕೃತಿ ರಕ್ಷಣೆಯ ಪ್ರತಿಜ್ಞೆ ಸ್ವೀಕರಿಸೋಣ,
ಕನ್ನಡ ನಾಡು,ನುಡಿಯ ಅಭ್ಯುದಯಕ್ಕೆ
ಅನುಕ್ಷಣವೂ ಕಟಿಬದ್ದರಾಗೋಣ.

ಡಾ.ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ
ಪುರಸ್ಕೃತರು,
ಸಾಹಿತಿಗಳು,ಹಿರಿಯ ಪತ್ರಕರ್ತರು
ಮೈಸೂರು
ಮೊಬೈಲ್ : 6363172368
9449680583

ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಚಿಸಿದ ಕವನ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group