ಹೊಸ ಜಗವು ನಮ್ಮದು
ನನ್ನ ಧ್ವನಿಯು
ಬುದ್ಧ ವಾಣಿ
ನನ್ನ ಧ್ವನಿಯು
ಬಸವ ನುಡಿಯು
ನನ್ನ ಮಾತು
ಅಂಬೇಡ್ಕರರ ನಿಲುವು
ನನ್ನ ನಿಷ್ಠೆ ವಚನವು
ನನ್ನ ಮಾರ್ಗ ಸಂವಿಧಾನ
ಕೊಲ್ಲರಾರಿರಿ
ನೀವು ನನ್ನನು
ನಾನು ಸತ್ಯ ಶಾಂತಿ ಪ್ರೀತಿ
ಬುದ್ಧ ಬಸವರ ದಾರಿಯಲ್ಲಿ
ನಿತ್ಯ ನಮ್ಮ ಪಯಣವು’
ಕ್ರಾಂತಿ ಕಹಳೆ ಮೊಳಗಲಿದೆ
ಹೊಸ ಗಾಳಿ ಬೀಸಲಿದೆ
ಹೊಸ ಬಾಳು
ಹೊಸ ಬದುಕು
ಹೊಸ ಜಗವು ನಮ್ಮದು
————————————
ಡಾ. ಶಶಿಕಾಂತ ಪಟ್ಟಣ ರಾಮದುರ್ಗ

