ಹೆಸರಾದನು ಬಸವಣ್ಣ
ಹೆಸರಾದನು ಬಸವಣ್ಣ
ಉಸಿರಾಗಲಿ ಲಿಂಗಾಯತ
ಗುರು ಲಿಂಗ ಬೀಜಗಳ
ಹಸಿರಾಗಲಿ ಜಂಗಮ
ದುಡಿವವರ ಮೂಲ ಮಂತ್ರ
ಕಾಯಕವೇ ಕೈಲಾಸ
ಕೊಲ್ಲಬೇಡಿ ಬಸವ ಧರ್ಮ
ಸಾಕು ನಿಮ್ಮ ಕರ್ಮ
ಇಲ್ಲ ಬಸವ ಮಠಗಳಲ್ಲಿ
ಇಲ್ಲ ಕಾವಿ ಪೀಠದಲಿ
ಸತ್ಯ ಪ್ರೇಮ ಶಾಂತಿ ಪ್ರೀತಿ
ಸಮತೆ ಸೂರ್ಯ ಕಾಂತಿ
ರಾಜಕೀಯ ಕೆಸರಿನಲ್ಲಿ
ಸಿಲುಕದಿರಲಿ ಶರಣ ತತ್ವ
ಮುಸುಕು ಹರಿದು ಬೆಳಗಾಗಲಿ
ಬಸವನೆಂಬ ದಿವ್ಯ ಜ್ಯೋತಿ
ಅಗ್ರಹಾರದ ಗುಲಾಮರಲ್ಲ
ಕಿತ್ತೊಗೆಯಿರಿ ಭ್ರಮೆ ಭ್ರಾಂತಿ
ಹಸಿ ರಕ್ತ ಹರಿದಿದೆ
ಮರೆಯಬೇಡಿ ಬಸವ ಕ್ರಾಂತಿ
_________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ 9552002338