- Advertisement -
ಭೂತಾಯಿ ನಕ್ಕಳು
ಬದಲಾದ ಕ್ಯಾಲೆಂಡರ
ಬದಲಾಗದ ಬದುಕು
ಹೊಸ ಭರವಸೆ ನೂರು
ಕನಸಾದವು ಚೂರು
ಕಾಣದಾಗದ ಬಾಳು
ಸಂಭ್ರಮದ ಗೀಳು
ದ್ವೇಷ ದಳ್ಳುರಿ ಬೇಗೆ
ಸೌಹಾರ್ದವು ಹೋಳು
ಭ್ರಷ್ಟ ನಾಯಕರ ದರ್ಪ
ದೇಶವಾಗಿದೆ ಹಾಳು
ಹಸಿವಿನಲ್ಲಿ ತತ್ತರಿಸಿವೆ
ದಿಕ್ಕಿಲ್ಲದ ಮಕ್ಕಳು
ರೈತ ಶ್ರಮಿಕರ ಸಾವು
ಸಾಲ ಸೂಲದ ನೋವು
ಹೊಸ ವರುಷದ ಅಬ್ಬರಕೆ
ಭೂತಾಯಿ ನಕ್ಕಳು.
ಡಾ. ಶಶಿಕಾಂತ.ಪಟ್ಟಣ -ಪೂನಾ