- Advertisement -
ಸುಗ್ಗಿಯ ಸಂಕ್ರಾತಿ ಬಂತು
ಸುಗ್ಗಿಯ ಸಂಕ್ರಾತಿಯು ಬಂತು
ಸಂಭ್ರಮದ ಸಡಗರವನ್ನು ತಂತು
ಎಲ್ಲಿ ನೋಡಿದರೂ ಸಂತಸ
ಎಲ್ಲಿ ನೋಡಿದರೂ ಸಂಭ್ರಮ
ಸುಗ್ಗಿಯ ಸಂಕ್ರಾತಿಯು ಬಂತು !!
ಎಳ್ಳು ಬೆಲ್ಲದ ಸಿಹಿಯನ್ನು ಸವಿಯೋಣ
ಎಲ್ಲರೂ ಸೇರಿ ಒಟ್ಟಾಗಿ ಬಾಳೋಣ
ಪ್ರೀತಿ ಪ್ರೇಮದ ಭಾವನೆಗಳನ್ನು ಅರಳಿಸೋಣ
ಈ ನಾಡಿನ ಬಾವುಟವನ್ನು ಬಲು ಎತ್ತರಕ್ಕೆ
ಬೆಳೆಸೋಣ…!!
- Advertisement -
ನೋವು ನಲಿವು ಕಷ್ಟ ನಷ್ಟಗಳ ಬೆಲೆಯನ್ನು
ಎಲ್ಲಾರೂ ಒಟ್ಟಾಗಿ ಸೇರಿ ತಿಳಿಯೋಣ
ಈ ಬದುಕಿನ ದಾರಿಯಲ್ಲಿ ಎಡವಿ ಬೀಳದಂತೆ
ಸರಿಯಾಗಿ ಎಲ್ಲರೂ ಒಟ್ಟಾಗಿ ಬಾಳೋಣ..!
ಈ ಮನದಲ್ಲಿ ಅರಳಿದ ಸುಂದರ ಆಸೆ
ಕನಸುಗಳಿಗೆ ಜೀವ ತುಂಬುವ ಹಾರೈಕೆಗಳನ್ನು
ನೀಡಿ ಅವುಗಳ ಜೊತೆಯಲ್ಲಿ ಸಾಗೋಣ
ವರುಷದ ಮೊದಲ ಹಬ್ಬವಾದ ಸಂಕ್ರಾಂತಿಗೆ
ಎಲ್ಲರೂ ಸೇರಿ ಮೆರುಗನ್ನು ತರೋಣ….!!
ನಿಜಗುಣಿ ಎಸ್ ಕೆಂಗನಾಳ
ಸಾಹಿತಿಗಳು ರಂಗಭೂಮಿ
ಕಲಾವಿದರು ಕಲಬುರಗಿ