- Advertisement -
ಮನದ ಮಲ್ಲಿಗೆ
°°°°°°° °°°°°°°°°
ನಾನು ಪಯಣಿಗ
ಅವಳೂ ಪಯಣಿಗಳು
ಒಂದೇ ಬಸ್ಸು,
ಕೆಲವು ಗಂಟೆ
ಆದರೂ ….
ಜೋಡಿಯ ಮೋಹ
ನಡುವೆ ಮಿಲನ
ಪ್ರೀತಿಯ ನೇಹ
ಕೆಲವು ಗಳಿಗೆ
ಕೂಡಿ ಬೆರೆತು
ಸಂಸಾರ ಮಾಡಿದೆವು
ಎಂಬ ಭಾವ
ಮಾತುಕತೆಯ
ಸಲಿಗೆ ತಾನೆ ಬೆಳೆದು
ಜೀವದಂತೆ ನಲಿದೆವು
- Advertisement -
ನಾನು ಯಾರೊ
ಅವಳು ಯಾರೊ!
ಜಗವ ಮರೆಯುವ
ಜೀವ ಜೀವ ಬೆರೆಯಿತು
ಕ್ಷಣ ಕ್ಷಣಕೆ
ಮನಕೆ ಮನವು
ಸೇರಿಕೊಂಡು
ಅನ್ಯ ಜಗದ ಕಣ್ಣ ತೆರೆದಿತು
ಅವಳು ಬಂದಳೆಲ್ಲಿಂದ
ನಾನು ಹೊರಟಿರುವುದೆಲ್ಲಿಗೆ
ತುದಿಯಿಲ್ಲ,
ಮೊದಲಿಲ್ಲ,
ಪಯಣದ ನಡುವೆ
ಒಗಟು ಬಿಡಿಸದ
ಬೆಳಕ ಕಣ್ಣು ಕತ್ತಲು
ಇಳಿಯುವ
ಹೊತ್ತು ಬಂದಿತು
ಲವಲವಿಕೆ ನಕ್ಕಿತು
ಹುಚ್ಚು ಲಹರಿ ಉಕ್ಕಿತು
ಅವಳ……
ಮೊಗ ಮಾತ್ರ
ಮನ ಮುತ್ತಿ ನಿಂತಿತು.
•••••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ