- Advertisement -
ಸಾರಿ
————-
ನಾರಿ ಮಹಿಳೆ
ನಿನ್ನ ಅಡವಿಗೆ
ಅಟ್ಟಿದ ದೇವಪುರುಷನ
ಪರವಾಗಿ ಸಾರಿ
ಅಂದು ಪಗಡಿಯಾಟದಲ್ಲಿ
ಒತ್ತೆ ಇಟ್ಟು ಸೀರೆ ಸೆಳೆದವರ
ಮಧ್ಯೆ ಸೊಲ್ಲೆತ್ತದೆ ಕುಳಿತವರ
ಪರವಾಗಿ ಸಾರಿ.
ಮೋಸದಿ ಮದುವೆಯಾಗಿ
ಉಪಭೋಗಿಸಿ
ತುಳಸಿಗೆ ನ್ಯಾಯ ಕೊಡದವರ
ಪರವಾಗಿ ಸಾರಿ
- Advertisement -
ಶೂರ್ಪನಖಿ ವಿರೂಪಗೊಳಿಸಿ
ಮೊಲೆ ಮೂಗು
ಕೊಯ್ದು ಅಟ್ಟಹಾಸ ಮೆರೆದವರ
ಪರವಾಗಿ ಸಾರಿ
ಶತಶತಮಾನದಿ ನಿನ್ನ ಕೊಂದವರ
ಮಾನಹರಣ ಮಾಡಿ ಕೇಕೆ ಹಾಕಿದವರ
ಸುಲಿಗೆ ಮಾಡಿ ಸೂಳೆ ಪಟ್ಟ ಕಟ್ಟಿದವರ
ಪರವಾಗಿ ವೆರಿ ವೆರಿ ಸಾರಿ.
ನಾರಿ ಗಟ್ಟಿ ಮನವ ಮಾಡು
ಚೆಂಡಾಡು ನಿನ್ನ ಶೋಷಿದವರ
ಹುಟ್ಟಡಗಿಸು ಮೆಟ್ಟಿ ನಿಲ್ಲು
ನಾನೆಂದೂ ಸಾರಿ ಹೇಳದಂತೆ ಮಾಡು
- Advertisement -
ಜೈ ನಾರಿ ಮಹಿಳೆ ಮಾತೆ
ನಿನ್ನ ಗೆಲುವೇ ಭಾಗ್ಯ ಧಾತೆ
——————————–
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ