spot_img
spot_img

ಕವನ : ಅವರವರ ದೇವ್ರು !

Must Read

spot_img
- Advertisement -

ಅವರವರ ದೇವ್ರು !

ಅವರವರ ದೇವ್ರು
ನನ್ನೊಳಗ ಮುಕ್ಕೋಟಿ
ಅವನೊಳಗ ಅಲ್ಲಾ
ಇವನೊಳಗ ಏಸು ಬುದ್ಧ ,
ಅವರವರ ದೇವ್ರು !
ಶಿವ ಗುಡಿಯೊಳಗ
ಅಲ್ಲಾ ಮಸೀದಿಯೊಳಗ‌
ಬುದ್ಧ ಜೈನ ಬಸದಿಯೊಳಗ
ಅವರವರ ಮಂದಿ ಮಾತ್ರ
ಬೀದಿ ಬದಿಯೊಳಗ.

ಇನ್ನು ಹುಲಗಿ ಉಚ್ಚಂಗಿ
ಮನೆ ಮಕ್ಕಳು
ವರ್ಷಕ್ಕೊಮ್ಮೆ ಸೀರಿ ಜೊತೆಗೊಂದು ಕುರಿ
ಉಣ್ಣೋದು ಎರಡು ಹೊತ್ತು
ಮುಟ್ಟಿಸಿನಿ ಕೊನೆಗೂ ಕುರಿ ಕೋಳಿ ಕತ್ತು .

- Advertisement -

ಅವರವರ ದೇವ್ರು
ಬಕ್ರೀದ್ ರಂಜಾನ್ ದರ್ಗಾದಾಗ
ಅಲ್ಲಿ ಅಡ್ಡ ಬಿದ್ದು ,
ಮನ್ಯಾಗ ಎತ್ತೋ ಕುರಿನೋ ಅಡ್ಡ ಹಾಕಿ
ಅಡ್ಡ ಬಿದ್ದಿದ್ದು ನಿನಗಾ
ಅಡ್ಡ ಹಾಕಿದ್ದು ನಿನಗಾ
ಊರೆಲ್ಲಾ ಸೇರಿ ಅವರವರ ಮನ್ಯಾಗ ತಿಂದು ಅಡ್ಡ ಬಿದ್ರು !
ಇವರು ಜೀವ ಕೊಯ್ದ್ರು .

ಅವರವರ ದೇವ್ರು
ತಾಸು ತಾಸು ಭಕ್ತಿ
ಸಿಗವಲ್ಲದು ಮುಕ್ತಿ
ಕೂತು ಕಟ್ಟಿದ್ದು ಕೂಟ
ತಿಂದಿದ್ದು ಮಾತ್ರ ಬ್ರೆಡ್ ರಸ
ಗೊತ್ತಿತ್ತು ದೇಹದಾಗ ಅದು ಕೊನೆಗೂ ಕಸ
ತಿಳಿವಲ್ಲದು ಆರು ದಿನದ ಶ್ರಮದ ವಾಸ .

ಆಸೆ ಬಯಸದ ತಂತ್ರ
ಗಡಿಯೊಳಗ ಆಸೆಗಾಗಿ ಪರದಾಡುವ ಕುತಂತ್ರ
ಆಸೆ ಗೆದ್ದವ ಚೀನಿಯಾಗಲಿಲ್ಲ,
ಹುಟ್ಟು ಸಾವು ಎರಡು ದಿಗಂಬರ
ಜೀವನ ಶ್ವೇತ ವಸ್ತ್ರದ ಆಡಂಬರ
ಅವರವರ ದೇವ್ರು ,
ತಿಳಿದಂಗ ಪೂಜಿಸಲಿ ಇದು
ಸಮಾನತೆಯ‌ ಸೂರು.

- Advertisement -

ಭೋವಿ ರಾಮಚಂದ್ರ
ಹರಪನಹಳ್ಳಿ
8861588118.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಗತ್ಯ ದಾಖಲಾತಿಗಳನ್ನು ನೀಡಿ ಇ- ಆಸ್ತಿ ದಾಖಲಿಸಿಕೊಳ್ಳಿ-ತುಕಾರಾಮ ಮಾದರ

ಮೂಡಲಗಿ - ಪಟ್ಟಣದ ಪುರಸಭೆ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ೨೦೨೪-೨೫ ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು...
- Advertisement -

More Articles Like This

- Advertisement -
close
error: Content is protected !!
Join WhatsApp Group