ಕವನ :ನನ್ನ ಧ್ವನಿ ಕೇಳದು

0
56

ನನ್ನ ಧ್ವನಿ ಕೇಳದು
______________

ಗೆಳೆಯರೇ

ನಾನು ಒದರುತ್ತಿದ್ದೇನೆ
ಚೀರುತ್ತಿದ್ದೇನೆ ಕೂಗುತ್ತಿದ್ದೇನೆ
ನಿಮಗೇಕೆ ಕೇಳಲೊಲ್ಲದು

ನೀವು ಸದ್ದು ಗದ್ದಲದ
ಸಂತೆಯಲ್ಲಿರಬಹುದು
ನನ್ನ ಧ್ವನಿ ಕೇಳದು

ನೀವು ಗಾಢ ನಿದ್ರೆಯಲ್ಲಿ
ಗೊರಕೆ ಹೊಡೆಯುತ್ತಿರಬಹುದು
ನನ್ನ ಧ್ವನಿ ಕೇಳದು

ನೀವು ಜಾತ್ರೆಯ ಕುಣಿತದಲ್ಲಿ
ಸೋಗು ವೇಷವ ಹಾಕಿದ್ದೀರಿ
ನನ್ನ ಧ್ವನಿ ಕೇಳದು

ಕಳೆದು ಹೋಗಿರುವಿರಿ
ಜೀವನ ಸಮಸ್ಯೆಗಳಲ್ಲಿ
ನನ್ನ ಧ್ವನಿ ಕೇಳದು

ನೀವು ಸತ್ತಿರ ಬಹುದು
ಮಸಣದ ಗೋರಿಯಲ್ಲಿ
ನನ್ನ ಧ್ವನಿ ಕೇಳದು

ನೀವು ಕಿವುಡರಿರಬಹುದು
ಕಿಟಕಿಯಾಚಿನ ಶಬ್ದ
ನನ್ನ ಧ್ವನಿ ಕೇಳದು

ಎಷ್ಟೋ ವರುಷವಾಯಿತು
ನಾನು ಕೂಗುತ್ತಿದ್ದೇನೆ ನಿರಂತರ
ನನ್ನ ಧ್ವನಿ ಕೇಳದು

ಇಂಕಿಲಾಬ್ ಜಿಂದಾಬಾದ
ವಿಶ್ವಪಥಕೆ ಹೆಜ್ಜೆ ಹಾಕಿ
ನನ್ನ ಧ್ವನಿ ಕೇಳದು

ನನ್ನ ಗಟ್ಟಿ ಧ್ವನಿಗೆ
ನಿಮ್ಮ ಧ್ವನಿ ಕೂಡಬೇಕು
ಬುದ್ಧ ಬಸವರ ಕ್ರಾಂತಿ ನೆನೆಯಬೇಕು
________________________

ಡಾ.ಶಶಿಕಾಂತ ಪಟ್ಟಣ ರಾಮದುರ್ಗ

LEAVE A REPLY

Please enter your comment!
Please enter your name here