ಕವನ : ಬಿಡದಿರಿ ನಮ್ಮತನ

0
70

ಬಿಡದಿರಿ ನಮ್ಮತನ

ತನ್ನತನವ ಬಿಟ್ಟು
ತನ್ನದಲ್ಲದಕೆ ಹರಿ ಬಿಟ್ಟು
ಕನ್ನಿಕೆಯ ಹಿಂದೋಡಿ
ಕುನ್ನಿಯಂತಾಗಬೇಕೆ ಮೋಡಿ.

ನಮ್ಮೊಳಗಿನದ ಸರಿಸಿ
ಪರರದಕೆ ಮೋಹಿಸಿ
ದಾಹ ತೀರಿದ ಮೇಲೆ
ಎಡ ಬಿಡಂಗಿಯಾಗಬೇಕೆ.

ಹರಸುವರು ಮೊದಲು
ಹೌಹಾರ ಬೇಡ
ಆರಿಸಿ ನೋಡೋಮ್ಮೆ
ತಾರಸಿಯ ಹತ್ತಿಸಿ ಒದೆಯುವರು.

ಮತ್ತಿನ ರಂಗು ತೋರಿಸಿ
ರಂಗಿನಾಟ ಆಡುವರು
ಕುಣಿಸುತಿಹರು ಮನ ಬಂದಂತೆ
ದಂಗಾಗದಿರು ಹಂಗು ತೊರೆದು.

ನೆಪ ಒಡ್ಡಿ ಕರೆವರು
ಕೊರಳ ಕೊಯ್ಯುವರು
ಪರ ಮೋಹ ತರವಲ್ಲ
ಓರೆ ಕೊರೆಗಳು ಸಹಜ ತಿದ್ದಿ ಮುಂದೆ ನಡೆ.

ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರು

LEAVE A REPLY

Please enter your comment!
Please enter your name here