ಸುಣದೋಳಿಯ ಶ್ರೀ ಗುರು
ಗಟ್ಟಿ ಇರಲಿ ತಂಗಿ ನಿನ್ನ ಭಾವ ಭಂಗಿ
ನಾನು ‘ದೊಡ್ಡಾಕೆಂದು ಕುಣಿಬ್ಯಾಡ ಹಿಗ್ಗಿ
ಗುರುವಿನ ಮರೆತು ಮಾಡಬ್ಯಾಡ ನೀ ಸುಗ್ಗಿ|| ಪ ||
ಮನದ ಮೈಲಿಗೆ ತೊಳಕೋರ ಶಿರಬಾಗಿ
ನಾನು ‘ಹೋದರೆ ವರವಾಗಿ ಶಿವಯೋಗಿ
ಹೀನ ದುರ‍್ಗುಣಗಳನ್ನು ನೀ ನೀಗಿ ಬಂದರೆ
ಅಪ್ಪಿಕೊಳ್ಳದೆ ಬಿಡದಿಹನು ಶಿವಯೋಗಿ
ಸತಿಸುತರ ಚಿಂತ್ಯಾಗ
ಯತಿವರನ ಮರತ್ಯಾಕ
ಪಂಚಾಕ್ಷರಿ ಮಂತ್ರ ಪಠಿಸಿದರ ಸಾಕ
ಸುಣದೋಳಿ ಯೋಗಿ ಬರತಾನ ಹಂತ್ಯಾಕ
ಹಗ್ಗವಿಲ್ಲದ ತೇರ ಹಿಗ್ಗಿಲೆ ಸಾಗುವಾಗ
ಸಗ್ಗದ ಜನರೆಲ್ಲಾ ಹುಬ್ಬಚ್ಚಿ ನೋಡುವಾಗ
ಗುಬ್ಬಚ್ಚಿಯಾಂಗ ಗೂಡಿನ್ಯಾಗ ಕುಳಿತು
ಏನ ಸಾಧಿಸಿದಿಯೋ ಗುರುವಿನ ಮರೆತು
ಮದಬಂದ ಆನಿಯಂಗ ಮೈಮರಿಬ್ಯಾಡ
ಕಡಿಜನ್ಮ ಐತಿ ಅರಿವು ಹಿಡಿದನೋಡ
ಕಡಿಗಳಿಗ್ಯಾಗ ಹುಡಕಾಡಿದರ ಸಿಗುದಿಲ್ಲ ಜೋಡ
ಜೀವ ಇದ್ದಾಗ ಪಾವನ ಮಾಡಿಕೊಂಡ ಓಡ
ಕೊಟ್ಟು ನೋಡುವನು ಗುರು ವರವ
ಕೊಂಡು ನೋಡುವನು ನಿನ್ನಯ ಹರವ
ಯಾರಿಗೆ ಯಾರ ನಿನಗೆಲ್ಲರು ಎರವ
ಗುರುವಿಗೆ ಬೆಲ್ಲವಾಗಿ ಇರೂನು ಬಾರ
ಹೊಳಿ ದಂಡಿಯ ಮ್ಯಾಲ ನಮ್ಮ ಜಡಿಸಿದ್ದನ ಊರು
ಜುಳು ಜುಳು ಹರಿತೈತಿ ಘಟಪ್ರಭೆ ಜೋರು ಸ್ವಚ್ಛ ಮನದಿ ಸಿದ್ಧನ ಪಾದ ಹಿಡಿದರ ನೀಚ ಕರ್ಮವು ಬಿಟ್ಟು ಬಹುದೂರ
ಬಸವರಾಜ ಜಾಬಶೆಟ್ಟಿ, ತಿಗಡಿ ( ಮೂಡಲಗಿ)