ಕವನ : ಕೆಂಪು ಸೂರ್ಯ

0
110

ಕೆಂಪು ಸೂರ್ಯ

ಕಪ್ಪು ಮಣ್ಣಿನ
ದಲಿತ ಕೇರಿಯ
ಮಹಾರಾಷ್ಟ್ರದ
ಕೆಂಪು ಸೂರ್ಯ.

ಬುದ್ಧ ಬಸವ ಮಾರ್ಕ್ಸ್
ಪುಲೆ ಶಾಹು ಚಿಂತನ
ಬರಿಗಾಲಿನ ಪಯಣ
ಕಿತ್ತು ತಿನ್ನುವ ಬಡತನ

ಶೃದ್ಧೆ ಶ್ರಮದ ಗೆಳೆತನ
ಕೊಲಂಬಿಯಾ ಶಿಕ್ಷಣ
ನೂರು ಪದವಿಯ ಜಾಣ
ಸತ್ಯ ಸಮತೆಯ ಬಾಣ

ಹಗಲಿರುಳು ಕಠಿಣ ಕಾರ್ಯ
ಬರೆದಿಟ್ಟರು ಲಿಖಿತ ಘಟನಾ
ಭಾರತ ದೇಶದ ಮಾನ ಸಮ್ಮಾನ
ಡಾ ಅಂಬೇಡ್ಕರರ ದಿವ್ಯ ಜ್ಞಾನ

ನ್ಯಾಯಕ್ಕಾಗಿ ಘೋಷಣಾ
ಇಲ್ಲವಾಯಿತು ಶೋಷಣಾ
ಬನ್ನಿ ಭಾರತೀಯರೇ
ಉಳಿಸುವ ನಮ್ಮ ಸಂವಿಧಾನ.

ಕೆಂಪು ಸೂರ್ಯ ಮುಳಗಲಾರ
ಸಮಾನತೆಯ ಹರಿಕಾರ
ಬಾಬಾ ಸಾಹೇಬ ಅಮರ ರಹೇ
ಬುದ್ಧ ಬಸವ ಜಿಂದಾಬಾದ
———————————–
ಡಾ.ಶಶಿಕಾಂತ ಪಟ್ಟಣ ಪುಣೆ

LEAVE A REPLY

Please enter your comment!
Please enter your name here