ಮೋಹಕ ಚೆಲುವೆ
ಬಾಂದಳದಿ ಹೊಳೆಯುವ ತಿಂಗಳ ಬೆಳಕಿನ
ಶ್ವೇತವರ್ಣೆ ನನ್ನ ಚೆಲುವೆ
ಬೆಳಗುವ ನಿನ್ನ ಕಣ್ಣುಗಳಲಿ
ಈ ಚೆಲುವನ ರೂಪವೇ ಅಡಗಿಕೊಂಡಿರುವುದ
ನಾ ಬಲ್ಲೆ
ನಾಚಿ ನೀರಾದ ಮೊಗ್ಗಿನ ಮುಡಿಯಂತಿರುವ
ನಿನ್ನ ಚೆಂದುಟಿ
ರುಧಿರ ವರ‍್ಣದ ಚೆಂಗುಲಾಬಿಯಲ್ಲವೇ ಚೆಲುವೆ ?
ನಾಟ್ಯ ಮಯೂರಿಯ ಕುಣಿತ
ನಾಚಿಸುವ ನಿನ್ನ ಹೆಜ್ಜೆಯ ನಾದಗಳು
ಎದೆ ಝಲ್ಲೆನಿಸಿ ತುಂತುರು ಮಳೆಯ
ಸಿಂಚನದಂತೆ ನಾಟ್ಯವಾಡಿ
ಮನವ ತಣಿಸುತಿವೆ
ಆಗಸದಿ ಹೊಳೆಯುವ
ಚೆಲುವಿನ ಮೋಹಕ ತಾರೆ
ನೀನಲ್ಲದೆ ಮತ್ತಾರು ಹೇಳು ಚೆಲುವೆ ?
ನನ್ನ ಮನದ ಮಾತಿನ ಒಡತಿ
ನೀನೆಂಬುದ ಬಲ್ಲೆ
ಚೈತ್ರಮಾಸದ ಚಿಗುರಿನಂತಿರುವ
ನಿನ್ನ ರೇಷ್ಮೆಯಂತಹ ಕೇಶರಾಶಿ
ಹೃನ್ಮನಗಳಲ್ಲಿ ಮೋಹದ
ಕಿಚ್ಚು ಹಚ್ಚಿ ಗಾಯ ಮಾಡಿದೆ
ಆ ಗಾಯಕೆ ಉಪ್ಪು ಸವರದೇ
ತಣ್ಣನೆಯ ತಂಗಾಳಿ ಬೀಸಿ
ಹೃದಯ ಹಗುರವಾಗಿಸುವ
ಮದ್ದು ನಿನ್ನ ಸಾನ್ನಿಧ್ಯವಲ್ಲವೆ
ಮತ್ತೇನು ಹೇಳು ಚೆಲುವೆ? ನಿನ್ನ ಅಂತರಂಗದ ಒಡೆಯನ ನಿವೇದನೆ ಇಷ್ಷೇ ಗೆಳತಿ ನೂರು ಜನ್ಮಕೂ ನೂರಾರು ಜನ್ಮಕೂ
ನೀನೇ ನನ್ನ ಚೆಲುವೆ
ನೀನೇ ನನ್ನ ಚೆಲುವೆ
ಶಿವಕುಮಾರ ಕೋಡಿಹಾಳ ಮೂಡಲಗಿ
ಮೊಬೈಲ್-೯೮೮೦೭೩೫೨೫೭