ಕವನ : ಬದುಕಬೇಕು

Must Read

ಬದುಕಬೇಕು

ಏನೂಂತ ತಿಳಿಯಲಿ
ಕೈಕಾಲು ಚಳಿಗೆ ಸೋತುಬಂದವು
ಸ್ವಲ್ಪ ಮಟ್ಟಿಗೆ ಮಲಗಿ
ನಿದ್ರೆಗೆ ಜಾರಿತು ಮನ

ಎಚ್ಚರವಾದಾಗ ಕೈ ಕಾಲು
ಸ್ವಾಧೀನ ಕಳೆದುಕೊಂಡಿವೆ
ತನ್ನರಿವು ಗೊತ್ತಾಗದಂತೆ
ವಕ್ಕರಿಸಿತ್ತು ಪಾರ್ಶ್ವವಾಯು

ಮನದಲ್ಲಿ ಆತಂಕ ಏನೋ ನೋವು
ಕಾಣೆಯಾದ ದಾರಿ
ಯಾರಾದರೂ ಸಲಹೆ ನೀಡುತ್ತಾರೆ ಎನ್ನಲು
ವೈದ್ಯಕೀಯ ಚಿಕಿತ್ಸೆ ಸಲಹೆ

ಅಯ್ಯೋ ನಿನಗೆ ಹೀಗಾಯಿತಲ್ಲ
ಎನ್ನುವ ಮನಸುಗಳಿಗೆ ಕೊರತೆಯಿರಲಿಲ್ಲ
ಆದರೂ ನಡೆಯುವ ಕುಳಿತುಕೊಳ್ಳುವ
ಭಾಗಗಳಲ್ಲಿ ಸ್ವಾಧೀನತೆ ಇಲ್ಲ

ರೋಗ ಒಂದು ಕಗ್ಗಂಟು
ಮನೋಸ್ಥೈರ್ಯ ಒಂದೇ ಆಶಾಕಿರಣ
ಎಲ್ಲರೂ ಸಾಂತ್ವನ ಹೇಳುವರು
ದೈರ್ಯ ಕಳೆದುಕೊಳ್ಳ ಬೇಡ ಎಂದು

ಚಿಕಿತ್ಸೆ ಸಾಗಿದಾಗ ಮನಸ್ಸು ಹಂಬಲಿಸುತ್ತಿತ್ತು
ಮೊದಲಿನಂತೆ ನಾನಾಗ ಬಲ್ಲನೇನು
ನನ್ನ ನೋವು ನನಗರ್ಥವಾಗುವುದು
ಆದರೂ ನಾನು ಹೋರಾಟ ನಡೆಸಬೇಕಾಗಿದೆ.

ಬದುಕಿನ ದಾರಿಯಲ್ಲಿ ಕತ್ತಲಾವರಿಸಿದೆ
ಬೆಳಕಿನ ಕಾರಣಗಳಿಗಾಗಿ
ಕಾಯಬೇಕು
ನನ್ನ ನಂಬಿದವರ ಮುಂದೆ ನಾನು ಬದುಕಬೇಕು
ನೋವಿನ ಬಿಡುಗಡೆ ಗಾಗಿ ಹಾತೊರೆಯುವೆ

ಡಾ.ವೈ ಬಿ ಕಡಕೋಳ. .
ಶಿಕ್ಷಕ ಸಾಹಿತಿಗಳು.
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ

Latest News

ರೈತರು ಸಾವಯವ ಕೃಷಿ ಮಾಡಿ ಭೂಮಿಯ ಫಲವತ್ತತೆ ಕಾಯಬೇಕು – ಸಹದೇವ ಯರಗೊಪ್ಪ

ಮೂಡಲಗಿ: ’ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡುವ ಮೂಲಕ ಭೂಮಿಯ ಫಲವತ್ತತೆಯನ್ನು ವೃದ್ಧಿಸುವ ಜೊತೆಗೆ ಸಮಾಜದ ಆರೋಗ್ಯವನ್ನು ಕಾಯುವುದು ಅವಶ್ಯವಿದೆ’ ಎಂದು ಚಿಕ್ಕೋಡಿ ಉಪ...

More Articles Like This

error: Content is protected !!
Join WhatsApp Group