ಕವನ : ಕನಸು ಕಾಣು

Must Read

ಕನಸು ಕಾಣು

ಕಾಣಬೇಕಿದೆ ಕನಸು
ಇರಲಿ ಒಂದಿಷ್ಟು ಆಸೆ
ನಲಿವ ರಂಗು ತುಂಬಲು
ಬದುಕಿಗೆ ಅರ್ಥ ಬರಲು.

ಹಕ್ಕಿಯಂತೆ ಹಾರಲು
ದುಂಬಿಯಂತೆ ಹೀರಲು
ಕೋಗಿಲೆಯ ಧ್ವನಿಯಾಗಲು
ರಾಗ ತಾಳ ಸೇರಲು.

ಕನಸು ಹೊತ್ತು
ದಿಟ್ಟ ಹೆಜ್ಜೆ ಇಟ್ಟು
ಭಾವ ಸುಧೆಯ ಹರಿಸಿ
ನೋವ ಸಹಿಸಿ ನುಗ್ಗಲು.

ನನಸಾಗುವ ಹವಣಿಕೆಯಲಿ
ಆತುರದ ಉನ್ಮಾದ ಏಕೆ
ಸಮರ ಸಾರುವೇ ಏಕೆ
ಅನವರತ ಕಾಯಕ ನಿಷ್ಠೆ ಸಾಕು.

ಕನಸು ಕಂಗಳ ತುಂಬಲಿ
ಹುರುಪು ಉತ್ಸಾಹ ಬೀರಲಿ
ಇರಿಸು ಮುರಿಸು ಆಗದಂತೆ
ನೀತಿ ನೇಮ ಮುರಿಯದಿರಲಿ ಸಾಕು.

ಕನಸು ಕಟ್ಟಬೇಕಿದೆ
ಮನಸು ಮಾಗಬೇಕಿದೆ
ದಿನಮಾನ ಉರುಳುತಿದೆ
ಕಳೆದು ಹೋಗುವ ಮುನ್ನ ಬಾಚಿಕೋ ಸಾಕು.

ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group