ಮಕ್ಕಳಿಗಾಗಿ ಒಂದು ಕವಿತೆ
ಮಂಗಣ್ಣಗಳು
ಬೆಳಗಿನ ಹೊತ್ತಿಗೆ
ಬೇಗನೆ ಎದ್ದು
ಹಾದಿ ಬೀದಿಯಲಿ
ತಿರುಗುವವು
ಗಿಡಗಳ ಹತ್ತಿ
ಚಿಗುರೆಲೆ ಕಿತ್ತು
ಖುಷಿಯಲಿ ತಿನ್ನುತ
ಕುಣಿಯುವವು
ಟೊಂಗೆ ಟೊಂಗೆಗೆ
ಹಾರುತ ಜಿಗಿಯುತ
ಹಣ್ಣು ಕಾಯಿಗಳ
ಹರಿಯುವವು
ಕಿಸಿ ಕಿಸಿ ಎಂದು
ಹಲ್ಲನು ಕಿರಿಯುತ
ಮಕ್ಕಳ ಮನವನು
ಸೆಳೆಯುವವು
ಪ್ರತಿ ವಾರವೂ
ತಪ್ಪದೆ ಸಮಯಕೆ
ನಮ್ಮ ಮನೆಗೆ ಅವು
ಬರುತಿಹವು
ನಾನು ತಿನಿಸುವ
ಸೇಂಗಾ ಕಾಳನು
ಖುಷಿಯಲಿ ತಿಂದು
ನಲಿಯುವವು
… ಆರ್. ಎಸ್. ಚಾಪಗಾವಿ
ಬೆಳಗಾವಿ 8317404648

