ಭದ್ರ ಬದುಕು
ನಾನು ನೀನು ನಿತ್ಯ
ಹೀಗೆ ನೆನಪಲಿ
ದಿನವ ನೂಕುತ್ತಿದ್ದೇವೆ
ನಗೆ ಸಂತಸ ಸಂಭ್ರಮ
ಕನಸು ಕವನ ಕಾವ್ಯ
ಭಾವ ಪ್ರೀತಿ ಒಲವು
ಹಂಚಿಕೊಂಡು
ನೀನು ನಾನು
ಪ್ರೀತಿಸಿದ್ದಂತೂ ನಿಜ
ಆದರೆ ಪ್ರೀತಿಗೆ
ಕಾರಣ ಏನು
ಎನ್ನುವ ಪ್ರಶ್ನೆಗೆ
ಉತ್ತರ ಮೌನ
ನಾವು ಕುರುಡು ಜಾಣ
ಹುಡುಕಾಟಕೆ ಸೋಲಿಲ್ಲ
ಹೃದಯ ಭಾಷೆಗೆ
ನೆಮ್ಮದಿಯ ಗೆಲುವು
ತಳಮಳ ನೋವು
ಶಮನಿಸುವ ಯತ್ನ
ಕಟ್ಟುವುದು ಗಟ್ಟಿ
ಭದ್ರ ಬದುಕು
ಡಾ.ಶಶಿಕಾಂತ ಪಟ್ಟಣ ರಾಮದುರ್ಗ

