ಕವನ : ಹುಡುಕುತ್ತಿದ್ದೇನೆ

Must Read

ಹುಡುಕುತ್ತಿದ್ದೇನೆ

ಹುಡುಕುತ್ತಿದ್ದೇನೆ ನಾನು
ಗುಡಿ ಚರ್ಚು ಮಸೀದಿ
ಗುರುದ್ವಾರ ಬಸದಿ ಮಠ
ಬೌದ್ಧ ವಿಹಾರಗಳಲ್ಲಿ

ಕಾಣಲಾರೇನು ದೇವರ
ಧರ್ಮ ತತ್ವ ಚಿಂತನೆ
ಎಲ್ಲೆಡೆ ಪೂಜೆ ಪ್ರಾರ್ಥನೆ
ಮರೆತು ಮನುಜ ಪಥ

ಬೈಬಲ್ ಕುರಾನ್ ಗೀತೆ
ವಚನ ಪಠಣ ನಿಂತಿಲ್ಲ
ಗಟ್ಟಿ ಧ್ವನಿಯ ಕೂಗು
ಶಬ್ದಗಳ ಲಜ್ಜೆ ಕರ್ಕಶ

ಹಸಿವು ಬಡತನ ಧರ್ಮ
ಸುಲಿಗೆ ಶೋಷಣೆ ಕರ್ಮ
ಉಳ್ಳವರಿಗೆ ದೇವರು ಪೂಜೆ
ಇಲ್ಲದವರಿಗೆ ಇದೆ ಭಿಕ್ಷೆ

ಹುಡುಕುತ್ತಿದ್ದೇನೆ
ನಿತ್ಯ ನಿರಂತರ ಶೋಧ
ನೆರಳು ಬಿಸಿಲು ತಾಪ
ಎಂದು ಕೊನೆ ಮನುಜ ಶಾಪ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Latest News

ಡಿಸಿಸಿ ಬ್ಯಾಂಕಿನ ಸೇವೆ ಇಡೀ ವರ್ಷವೂ ರೈತರಿಗೆ ಸಿಗಲಿದೆ – ಅಣ್ಣಾಸಾಹೇಬ ಜೊಲ್ಲೆ

ಬೆಳಗಾವಿ - ಮುಂದಿನ ಐದು ವರ್ಷದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಅನೇಕ ಹೊಸ ಹೊಸ ಯೋಜನೆಗಳನ್ನು ರೂಪಿಸಿದ್ದು, ರೈತರ ಜೀವನಾಡಿಯಂತೆ ಬ್ಯಾಂಕಿನ...

More Articles Like This

error: Content is protected !!
Join WhatsApp Group