ಕವನ : ಅರ್ಥವಾಗಲಿಲ್ಲವೇನು ?

Must Read

ಅರ್ಥವಾಗಲಿಲ್ಲವೇನು ?

ಅವತ್ತು ಇದೇ ಹಾದಿಯಲ್ಲಿ
ಪುರುಷ ಕಣ್ಣಿನ ನೇತ್ರ ಚೆಲುವೆ
ನಿಟ್ಟಿಸಿರು ಬಿಟ್ಟು ಹಂಬಲಿಸಿದ್ದು
ಸೆರಗೊಡ್ಡಿ ಬೇಡಿದ್ದು
ಕಣ್ಣಿಗೆ ಕಾಣಲಿಲ್ಲವೇನು ?

ಅಳುವ ಮೋರೆಯೊಳಗೆ ಅವಳ ಕನಸ್ಸು
ಸೋತು ಕಣ್ಣು ರೆಪ್ಪೆಯೊಳಗೆ
ಹುಡುಕಿ ನಲಿಯುವ ಸೊಗಸು
ಕಾಣದ ಕೈಗಳು
ಚಿವುಟಿ ಒಗೆದಿದ್ದವು
ಕರುಣೆ ಬರಲಿಲ್ಲವೇನು ?

ಜಾನಕಿಯ ಒಲವು ರಾಮನ ಗೆಲುವು
ಹೊಟ್ಟೆಯೊಳಗೆ ಕಂದಮ್ಮಗಳು
ಕಾನನದ ಪಯಣದಲಿ ಒಂಟಿ
ಕರ್ಕಶ ಶಬ್ದ ಪ್ರಾಣಿ ಪಕ್ಷಿಗಳಂತೆ
ಬಿಟ್ಟು ಹೊರಟು ಹೋದ ಸೌಮಿತ್ರಿ
ದುಃಖ ಬರಲಿಲ್ಲವೇನು ?

ಪೌರುಷ ಮೃದು ಹೃದಯಿದುಷ್ಯಂತ
ಬರೀ ಹೆಸರಿಗೆ
ಬಿಕ್ಕುವ ಮನದಲಿ ಕಳೆದು ಹೋದ ಉಂಗುರ ಜಲದ ಮತ್ಸ್ಯಕ್ಕೆಆಹಾರ
ಅರಿವಾಗಲಿಲ್ಲವೇನು ?

ಹೊಟ್ಟೆಯೊಳಗಿನ ಕಂದ
ತನ್ನದೆಂದು ತಿಳಿಯದ ಪ್ರೇಮಿ ದುಷ್ಯಂತ
ಶಕುಂತಲೆಯ ನಿತ್ಯ ರೋಧನ
ಕಳೆದು ಸವೆಸಿದ ಇರುಳು ರಾತ್ರಿ
ಸತಿ ತನ್ನವಳೆಂದು
ಎಚ್ಚರವಾಗಲಿಲ್ಲವೇನು ?

ತಾಯಿಗೆ ಸಮ ಪಾಂಚಾಲಿ
ಕೊಳಕು ತೊಡೆಯ ತೋರಿಸಿ
ಅವಮಾನಿಸಿದ ಭೂಪ
ಕೌರವ ದುಶ್ಯಾಸನ
ತಾಯೊಲವಿನ ಕಿಂಕರತ್ವ.
ಅರ್ಥವಾಗಲಿಲ್ಲವೇನು ?

ಡಾ.ಸಾವಿತ್ರಿ ಕಮಲಾಪೂರ

LEAVE A REPLY

Please enter your comment!
Please enter your name here

Latest News

ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ

ಮಹಾರಾಷ್ಟ್ರ ಮತ್ತು ಭಾರತೀಯ ಚಿತ್ರ ರಂಗಕ್ಕೆ ಕನ್ನಡದ ಕೊಡುಗೆ ಅಪಾರ. ಅಮೀರ್ ಬಾಯಿ ಕರ್ನಾಟಕಿ ಗುರು ದತ್ತ ಶ್ಯಾಮ ಬೆನಗಲ್ ಗಿರೀಶ್ ಕಾರ್ನಾಡ ವಿ ಶಾಂತಾರಾಮ...

More Articles Like This

error: Content is protected !!
Join WhatsApp Group