ಕವನ : ಹೊಸ ವರ್ಷದ ಕೋರಿಕೆ

Must Read

ಹೊಸ ವರ್ಷದ ಕೋರಿಕೆ

ಓ ಮನುಜ
ಜೀವನ ಪೂರ
ಹಣ, ಅಧಿಕಾರ, ಕೀರ್ತಿಗಳ
ಹಿಂದೆ ಓಡಿದ್ದು ನಿನ್ನ ತಪ್ಪಲ್ಲ,
ಪ್ರತಿ ಕ್ಷಣ ಬದಲಾಗುತ್ತಿರುವ
ಜನಜೀವನ
ಅಧಿಕಾರ, ಅಂತಸ್ತು, ಹಣದ
ಬೆಲೆ ಕಟ್ಟುವುದು
ವಾಸ್ತವ ದುರಂತ

ಓಡಿದ್ದು ಸಾಕು
ನಿನ್ನ ಸಾಕಿ – ಸಲಹಿದ
ನಿನಗೆ ನೆಲೆ – ಬೆಲೆ ನೀಡಿದ
ಸಮಾಜಕ್ಕೆ ಏನಾದರೂ ನೀಡು..

ರಕ್ತದಾನ ಮಾಡು
ನೂರಾರು ಜನರಿಗೆ
ಪ್ರಾಣ – ತ್ರಾಣ ನೀಡು,
ನೇತ್ರದಾನ ಮಾಡು
ನಾಲ್ಕಾರು ಅಂಧರಿಗೆ
ಬೆಳಕು ನೀಡುವ ತಾರೆಯಾಗು,
ಅಂಗಾಂಗ ದಾನ ಮಾಡು

ನೂರಾರು ರೋಗಿಗಳಿಗೆ, ಆಶಕ್ತರಿಗೆ
ಜೀವದಾನ ನೀಡು,
ನಿನ್ನ ಮೆಚ್ಚಿನ ದೇಹವ ದಾನಮಾಡು
ಭವಿಷ್ಯದ ಆರೋಗ್ಯಕರ ಸಮಾಜಕ್ಕೆ
ಸಂಶೋಧನೆ ಮಾಡುವ
ಯುವ ವ್ಯೆದ್ಯ ಪ್ರಪಂಚಕ್ಕೆ
ನೀ ದಾರಿದೀಪವಾಗು..
ಭವಿಷ್ಯದ ಸಮಾಜದ
ಅರೋಗ್ಯ ವಾಣಿ ನೀನಾಗು..

ಡಾ. ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು
ಮೈಸೂರು
ಮೊಬೈಲ್ 6363172368

LEAVE A REPLY

Please enter your comment!
Please enter your name here

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group