ಕವನ : ಕುವೆಂಪು ಹೇಗೆ ನಾ ಮರೆಯಲಿ

Must Read

ಕುವೆಂಪು ಹೇಗೆ ನಾ ಮರೆಯಲಿ

ವಸಂತ ಕಾಲ ನನ್ನೇ ನಾ ಮರೆವೆ
ರಾಷ್ಟ್ರಕವಿಯು ಕುವೆಂಪು ನೆನಪು
ಹೇಗೆ ನಾನು ಮರೆಯಲಿ

ಕವಿಯೇ ನಿಮ್ಮ ಕವಿತೆಯಲ್ಲಿ
ವಿಶ್ವ ಮಾನವ ಸಂದೇಶ ಇರುವಲ್ಲಿ
ನಾಡ ಗೀತೆ ಬರೆದ ಕವಿಯ
ಹೇಗೆ ನಾನು ಮರೆಯಲಿ

ಮಳೆಗಾಲದ ದಟ್ಟ ಅನುಭವ
ಕಟ್ಟಿ ಬರೆದರು ಕಥೆಗಳಲ್ಲಿ
ಮಲೆನಾಡಿನ ಜನರ ಜೀವನ
ಕಣ್ಣು ಮುಂದೆ ತೇಲಿ ಬರುತಲಿ
ಹೇಗೆ ನಾನು ಮರೆಯಲಿ

ದೃಶ್ಯ ಕಾವ್ಯ ರಮ್ಯ ನಾಟಕ
ಜಲಗಾರ ರಕ್ತಾಕ್ಷಿ ರುದ್ರನಾಟಕ
ಪುರಾಣ ಕಾವ್ಯ ರಾಮಾಯಣ
ದರ್ಶನ ತೋರಿದ ಕವಿಯ
ಹೇಗೆ ನಾನು ಮರೆಯಲಿ

ಅಂಕುಶದ ಹಂಗಿಲ್ಲದೆ
ಎದೆಯ ಬೆಳಕಿನ ಆಸರೆಯಲ್ಲಿ
ಜಗಕೆ ಬೆಳಕಾಗುವ
ಈ ಸನ್ಮತಿ ನನಗಿರಲಿ

ಗೊರೂರು ಅನಂತರಾಜು,
ಹಾಸನ
9449462879

LEAVE A REPLY

Please enter your comment!
Please enter your name here

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group