ಕವನ : ಅಪಸ್ವರದ ಸಂತೆ

Must Read

ಅಪಸ್ವರದ ಸಂತೆ

​ಎಲ್ಲರ ಸಮ್ಮುಖದಿ
ಮನದಳಲು ತೋಡಿ
ಅಳಲಾರೆ ನಾನು
ಅಪಸ್ವರದ ಸಂತೆಯ ತೊರೆದು,ಅಪೋಶನಗೈದು
ಏಕಾಂತದ
ಅನಂತದತ್ತ ಸಾಗಿ
ನಗು ನಗುತಾ
ಕಣ್ಣೀರಾಕಿಬಿಡುತ್ತೇನೆ

​ಈ ಕ್ರೂರ ವ್ಯವಸ್ಥೆಯ
ನೋಡಿ,
ರೇಗಾಡುವುದಿಲ್ಲ ನಾನು,
ಸೋಲಿನ ಪ್ರತಿ
ಮೆಟ್ಟಿಲ ಮೇಲೆ
ಮಾರಾಟವಾದ
ಮಾತುಗಳ ಗಮನಿಸಿ
ಮೌನದ ಕುಲುಮೆಯಲ್ಲಿ
ಶಬ್ದಗಳ
ಕರಗಿಸಿಬಿಡುತ್ತೇನೆ

​ಯಾರ ಮುಂದೆಯೂ
ಅರಚುವುದಿಲ್ಲ ನಾನು
ವಿಕಾರಗಳು
ಎದೆಯನ್ನು ಕಿವಿಚಿದರೂ
ಹನಿ ಹನಿ ವಿಷವ ಕುಡಿದು
ಮೌನವಾಗಿ
ನಂಜಾಗಿ ಬಿಡುತ್ತೇನೆ
ಸಾವಿನ ಕರೆಯನು
ನಿರಾಕರಿಸಿ
ನನ್ನೊಳಗೆ ನಾನು ಸಹನೆಯ ಶವವಾಗಿ ಬಿಡುತ್ತೇನೆ.
•••••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ

LEAVE A REPLY

Please enter your comment!
Please enter your name here

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group