ಕವನ : ನಗೆ ಹುಡುಕಬೇಕು

Must Read

ನಗೆ ಹುಡುಕಬೇಕು

ದುಃಖದ ದೌಲತ್ತಿಗೆ
ನಾನೊಬ್ಬನೆ ಸಿರಿವಂತ
ಎಂದುಕೊಂಡಿದ್ದೆ
ಹತ್ತಿರದಿಂದ ನೋಡಿದರೆ
ಎಲ್ಲರೂ ಧನಿಕರೆ

ಆಗಸದಲಿ ಹಾರುತ್ತ
ಗುಂಪನಗಲಿದ ಗುಬ್ಬಿ
ದುಃಖಿಸದೆ ಮತ್ತೆ
ಗೂಡು ಕಟ್ಟುವುದು ಕಂಡು
ಮೂಕನಾದೆ

ಕಾಲಲ್ಲಿ ಬೂಟಿಲ್ಲ ಎಂದು
ಕಿರುಚಾಡುವ ಬಾಲಕ
ಕಾಲಿಲ್ಲದ ಬಡವ
ಬೀದಿಯಲಿ ಹೂವು
ಮಾರುವುದು ಕಂಡು ಮೌನವಾದ

ಬದುಕು ಇಷ್ಟೇ ನೋವು
ನುಂಗುವವರ ಕಂಡು
ಬಾಳು ಕಾಣಲು ಬೇಕು
ದುಃಖದ ಮಡುವಿನಲಿ
ನಗೆ ಹುಡುಕಬೇಕು
________________________

ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group