ಕವನ : ಬಳಿ ಬಂದು ಒಮ್ಮೆ

0
174

ಬಳಿ ಬಂದು ಒಮ್ಮೆ

ಕಾಡಬೇಡ ಜೀವವೇ
ಅರಳಿ ನಿಂತ ನೇಹವ
ಅಳಿಸಿ ನಗುತಲಿ

ದೂರ ಬೇಡ ಜೀವವೇ
ಬೆಸೆದ ಭಾವ ಬಂಧ
ಹೊಸಕಿ ಹಾಕುತ

ನೀಡಬೇಡ ನೋವನು
ಬಳಿಯಲಿದ್ದು
ಮೌನದಲಿ ಕೊಲ್ಲುತ

ನೋಡಿಯೂ ನೋಡದಂತೆ
ಹೋಗಬೇಡ ಜೀವವೇ
ಬಳಿ ಬಾರ ಒಮ್ಮೆ….

ಪ್ರೀತಿಯಿಂದ ಬಳಿ ಕರೆದು
ಎದೆ ತುಂಬಿ ಹಸಿರಾಗಿ
ಉಸಿರೇ ತೊರೆಯ ಬೇಡವೇ

ನಿನ್ನ ಸ್ನೇಹ ಸಂಪ್ರೀತಿ
ಹನಿಯ ಹಾಡಿಗಾಗಿ
ಕಾಯುತಿರುವೆ ನೋಡಾ…

ಇಂದಿರಾ ಮೋಟೆಬೆನ್ನೂರ. ಬೆಳಗಾವಿ.