spot_img
spot_img

ಕವನ : ಮುನಿಬೇಡ್ವೋ ಮಳೆರಾಯಾ

Must Read

spot_img
- Advertisement -

ಮುನಿ ಬೇಡ್ವೋ ಮಳೆರಾಯಾ

ಇದೇನ್ ಕೋಪಾನೋ ರಾಜಾ ನಿಂಗೆ
ಹೋಗ್ಬೇಕು ನಾವ್ ಕ್ಯಾಮೆಗೆ
ಹಿಂಗಾದ್ರೆ ನಮ್ಜೀವನಾ ಹೆಂಗೆ
ಒಂಚೂರು ಪಾರು ನಿಲ್ಬಾರ್ದೆ ||

ನಿನ್ ಬರೋದ್ ಬರ್ತಿಯಾ
ಹೊತ್ತುಗೊತ್ತು ನೋಡಿ ಬಾರಯ್ಯಾ
ಯಾಕೆ ಕಿರಿಕಿರಿ ಮಾರಾಯಾ
ನಮ್ಮ ಪಾಡ್ ವಸಿ ನೋಡಯ್ಯಾ ||

- Advertisement -

ಊಟ್ದೊತ್ತಿಗೆ ಮತ್ತಂಗೇ ಬರ್ತಿ
ಹೋಗೋದ್ಹೇಗೆ ನಿನ್ನ್ ತಪ್ಸಿ
ಸಾಕ್ ಸಾಕಾಯ್ತು ನಂಗುನೂ
ಇದೇನ ಕತೆನೋ ನಿಂದೂನೂ ||

ಸಂಜೆ ಹೊತ್ತಲ್ಲರ ಬಿಡ್ತೀಯಾ
ಹೆಚ್ಚ ಹೆಚ್ಚಾಗಿ ಕಾಡ್ತೀಯಾ
ಕೋಡ್ಬೇಳೆ ಕೊಡಸ್ತೀನಿ ಸುಮ್ಕಿರೋ
ಮುನಿ ಬೇಡ್ವೋ ಮಳೆರಾಯಾ ||

ಮನೆಗುಂಟಾ ಹೋಗೋವರ್ಗೂ
ವಸಿ ದಯೆ ಇರ್ಲಿ ನನ್ನಪ್ಪ
ಕೈ ಜೋಡಸ್ತೀನಿ ಅಡ್ಡ ಬೀಳ್ತೀನಿ
ಗೂಡ ಸೇರಿದ್ಮೇಲೆ ಸುರಿವಂತೆ ||

- Advertisement -

ನಿನ್ನ್ ಗುಂಟ ಆಗಾಗಾ ಸೂರೀನೂ ಬರ್ಲಿ
ಬಟ್ಟೆನೇ ಒಣ್ಗ್ತಿಲ್ಲಾ ಎನ್ ಹೇಳ್ಲಿ
ನೀವ್ ಇದ್ರೇನೆ ನಮ್ಮ್ ಬಾಳ್ವೆ
ಇಲ್ಲಂದ್ರೆ ಗೋಳ್ ಹೇಳ್ಬೇಕೆ ||

ಇಬ್ರೂ ಇಲ್ಲಾಂದ್ರೆ ಎನ್ ನಡಿಯಲ್ಲಾ
ನಿಮ್ಮಾಟಾ ಹೆಚ್ಚಾದ್ರೂ ನಾವ್ ತಡಿಯಲ್ಲಾ
ಜರಾ ನೋಡ್ಕೊಂಡ್ ಆಟಾ ಆಡ್ರಪ್ಪೋ
ಬಡ್ಪಾಯಿ ಜನ ಬದ್ಕೊಳ್ಲಿ ಕನ್ರಪ್ಪೊ ||

ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ
ಬಿ.ಆರ್. ಪಿ. ಚ. ಕಿತ್ತೂರು

- Advertisement -
- Advertisement -

Latest News

ಶ್ರೀನಿವಾಸ ಶಾಲೆಯ ಆಡಳಿತ ಮಂಡಳಿ ಬದಲಾಗುವುದಿಲ್ಲ – ಅಧ್ಯಕ್ಷ ರಂಗಣ್ಣ ಸೋನವಾಲಕರ

ಮೂಡಲಗಿ - ಶ್ರೀನಿವಾಸ ಶಾಲೆಯನ್ನು ಬೇರೆಯವರಿಗೆ ಮಾರುತ್ತಿದ್ದಾರೆ, ಆಡಳಿತ ಮಂಡಳಿ ಬದಲಾಗುತ್ತದೆ ಎಂಬ ವದಂತಿ ಹರಡಿದ್ದು ಅದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಶ್ರೀನಿವಾಸ ಸ್ಕೂಲ್ಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group