Homeಕವನಕವನ : ಕಾಡು ಬೆಳೆಸಿ ನಾಡು ಉಳಿಸಿ

ಕವನ : ಕಾಡು ಬೆಳೆಸಿ ನಾಡು ಉಳಿಸಿ

         ಕಾಡು ಬೆಳೆಸಿ ನಾಡು ಉಳಿಸಿ…
( ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು)

ಹಸಿರೇ ಉಸಿರು ಉಸಿರೇ ಹೆಸರು
ಮಳೆಯಿoದ ಬೆಳೆ, ಬೆಳೆಯಿoದ ಪೈರು
ಪ್ರಕೃತಿಯ ಮಡಿಲಲಿ ನಿತ್ಯ ಹಸಿರ ತೇರು
ಬಾನೆತ್ತರೆಕ್ಕೆ ಬೆಳೆಸಿ ಅಮೃತದ ಕಲ್ಪತರು

ಸುಂದರ ಪ್ರಕೃತಿಯು ಮನಸನು ಸೆಳೆಯುವುದು
ಭಗವಂತ ನೀಡಿದ ನಿಸರ್ಗ ಧಾಮವಿದು
ಎಷ್ಟು ಇಂಪು ಮುಂಜಾನೆ ಕೋಗಿಲೆ ಕೂಗುವುದು
ಮಯೂರಿಯ ನೃತ್ಯ ನೋಡಲು ಎರಡು ಕಣ್ಣು ಸಾಲದು

ಕಾಡು ಬೆಳೆಸಿ ನಾಡು ಉಳಿಸಿ
ಮರ ಗಿಡ ಕಡಿಯುವ ಕ್ರೂರತನ ನಿಲ್ಲಿಸಿ
ಕಾಡು ಪ್ರಾಣಿಯ ಬೇಟೆಯ ಅಳಿಸಿ
ಗುಡಿಸಲು ಕಟ್ಟಿ ಕಾಡಲ್ಲಿ ನೆಮ್ಮದಿ ಅನುಭವಿಸಿ

ಜೀವ ಉಳಿಸುವ ಪ್ರಾಣ ವಾಯುವಿದೆ
ರೋಗಗಳಿಗೆ ರಾಮಬಾಣದ ಗ್ಯಾರಂಟಿ ಔಷಧವಿದೆ
ಕವಿ ಸಾಹಿತಿಗಳಿಗೆ ನೆಮ್ಮದಿಯ ತಾಣವಿದೆ
ಗಡ್ಡೆ ಗೆಣಸುಗಳ ಸಿಹಿಯಾದ ಫಲವಿದೆ

ಹಸಿರೇ ಉಸಿರಾಗಲಿ ಸದಾ ನಿತ್ಯ ನೂತನ
ಮರಗಳ ನೆಟ್ಟು ಪರಿಸರ ಉಳಿಸಿ ಬದುಕು ಪಾವನ
ಸಂರಕ್ಷಿಸಿ ಅನುದಿನ ಹಚ್ಚ ಹಸಿರಿನ ಪ್ರಕೃತಿಯನ
ಪ್ರಕೃತಿ ಇರದಿದ್ದರೆ ನಮ್ಮ ಬದುಕೇ ಶೂನ್ಯ ಜೋಪಾನ

ನಿಲ್ಲಿಸು ಮಾನವ ನಿನ್ನ ಕ್ರೂರತನ
ನಮ್ಮಂತೆ ಉಳಿಯಲಿ ಕಾಡು ಪ್ರಾಣಿಗಳ ಸಂತಾನ
ತಿಳಿ ಸಾಲುಮರದ ತಿಮ್ಮಕ್ಕಳ ದಿಟ್ಟತನ
ಅಂದಾಗ ಪರಮಾತ್ಮನೂ ಕೂಡ ಮೆಚ್ಚುತ್ತಾನ

ಮುತ್ತು ಯ.ವಡ್ಡರ
ಶಿಕ್ಷಕರು
9019565294

RELATED ARTICLES

Most Popular

error: Content is protected !!
Join WhatsApp Group