Homeಕವನಕವನ : ಸಿಂಧೂರ

ಕವನ : ಸಿಂಧೂರ

ಸಿಂಧೂರ

ಆಕೆ ನಗುತ್ತಾಳೆ..ಅವನಿಲ್ಲದಿದ್ದರೂ..
ಜನ ಮನಬಂದಂತೆ ಹಂಗಿಸುವರು
ಅವರಿಗೇನು ಗೊತ್ತು…?
ಅವಳ ಹಣೆಯ ಮೇಲಿನ ಸಿಂಧೂರ

ಅವಳ ಸೌಂದರ್ಯಕ್ಕಿಟ್ಟ ಕಲಶ.
ಪ್ರತಿ ದಿನ ಕುಂಕುಮ ಇಡುವಳು ಅವನ ನೆನಪಲ್ಲಿ..ಅಂದಿಟ್ಟ ನೆನಪಲಿ..ಅಂದವನಿಗಿಟ್ಟ ಮಾತಿನ ನೆನಪಲ್ಲಿ..

ಅರಶಿನ, ಲಿಂಬೆ ಮತ್ತು ಪಾದರಸದ ಮಿಶ್ರಣ ಈ ಸಿಂಧೂರ
ಸಿಂಧೂರ ಗಿಡದಿಂದ ತಯಾರಾಗುವ ಕೆಂಪು ಗುಲಾಬಿ ವರ್ಣ
ಭಾರತೀಯ ಸಂಸ್ಕೃತಿಯ ಮುತೈದೆಯ ಸಂಕೇತ

ದುರ್ಗಾದೇವಿ ಯ ಸಂಕೇತ
ದುಷ್ಟರ ವಿನಾಶದ ದ್ಯೋತಕ
ದುಷ್ಟ ಸಂಹಾರ ಶಿಷ್ಟ ರಕ್ಷಕ
ಅಮಾಯಕರ ಸಾವಿಗೆ ಪ್ರತಿಕಾರ

ಛಿದ್ರವಾಯಿತು 6 ಉಗ್ರ ನೆಲೆಗಳು
ಕಾಳಿ ರಕ್ಕಸರ ರುಂಡ ಚಂಡಾಡಿದ ತೆರದಿ
ಬೆಳಗಾಗುವುದರೊಳಗೆ ಉರುಳಿದ ರಕ್ಕಸರು
ನ್ಯಾಯಕ್ಕೆ ಇಟ್ಟ ಹೆಸರು
ಆಪರೇಷನ್ ಸಿಂಧೂರ

ಜೂನ್ 5 ಪರಿಸರ ದಿನ
ಗಿಡ ನೆಟ್ಟರು ಸಿಂಧೂರ
ಭಾರತದ ಹೆಮ್ಮೆಯ ಪ್ರತೀಕ
ಬೆಳೆಯಲಿ ಮುಂದಿನ ದಿನಗಳಲ್ಲಿ ದುಷ್ಟ ಶಿಕ್ಷೆ ಶಿಷ್ಟ ರಕ್ಷೆಯ ನೆನಪಲಿ

ಆಪರೇಷನ್ ಸಿಂಧೂರ
ಭಾರತೀಯ ಹೆಣ್ಣು ಮಕ್ಕಳ
ಸಿಂಧೂರ ಅಳಿಸಿದ ದುಷ್ಟರ ವಿರುದ್ಧ
ಸೇನೆಯ ಕಾರ್ಯಾಚರಣೆ ಯಾಗಿ ನಡೆದ ದಾಳಿ

ಪರಿಸರ ದಿನದಂದು ಸಿಂಧೂರ ವನ ತಲೆ ಎತ್ತಿ
ಎಲ್ಲೆಲ್ಲೂ ಸಿಂಧೂರ ಸಸಿಗಳು
ಹುಟ್ಟಿದ ಹೆಣ್ಣು ಮಕ್ಕಳ ಹೆಸರು ಸಿಂಧೂರ
ಎಲ್ಲೆಲ್ಲೂ ಹೊಸ ಟ್ರೆಂಡ್ ಸಿಂಧೂರ ಸಿಂಧೂರ

ವೈ ಬಿ ಕಡಕೋಳ
ಶಿಕ್ಷಕ ಸಾಹಿತಿಗಳು
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ

RELATED ARTICLES

Most Popular

error: Content is protected !!
Join WhatsApp Group