ಕವನ : ಬಂಜೆಯಾದಳೆ ಭೂಮಿ

Must Read

ಬಂಜೆಯಾದಳೆ ಭೂಮಿ

ಬಂಜೆ ಎಂಬ ಪದ ಬೇಡ
ಈ ಭೂ ತಾಯಿಗೆ
ರೈತರು ಮಕ್ಕಳಿರುವಾಗ
ರೈತನ ಹಡೆದವಳು ಭೂ ತಾಯಿ
ಬೆಳೆದ ಭೂ ಒಡಲಲ್ಲಿ
ದವಸ ಧಾನ್ಯ ತರಕಾರಿ
ಹಣ್ಣು ಹಂಪಲು ಭಾರಿ
ಬಿಡಲಿಲ್ಲ ಅವನು
ಮರಳು ಕಾಳು ಕಡಿ
ಬೆನ್ನು ಹತ್ತಿದರು ದಲ್ಲಾಳಿ
ಸೊರಗಿದ ಸೋತ ರೈತ
ತಾಯಿ ಎದುರು ಶರಣಾದ
ನೇಣು ಆತ್ಮ ಹತ್ಯೆ
ಮಗನ ಕಳೆದು ಕೊಂಡ
ತಾಯಿ ವೇದನೆ ಭೂಮಿಗೆ
ಮತ್ತೆ ಬಂಜೆಯಾದಳು
ಸ್ಮಾರ್ಟ್ ಸಿಟಿ ಮೆಟ್ರೋ ಸಿಟಿ
ಕಾರ್ಪೊರೇಟ್ ಜಗತ್ತಿಗೆ
ಮುಚ್ಚಿದರು ಕೆರೆ ಬಾವಿಗಳ
ಕಟ್ಟಿದರು ಮುಗಿಲು ಮುಟ್ಟುವ
ಮಹಲು ಅಪಾರ್ಟ್ಮೆಂಟ್ ಮಾಲು
ಗಿಡ ಮರ ಕಡಿದರು
ಎಲ್ಲೆಂದರಲ್ಲಿ ಮೊಬೈಲ್
ಟವರ್ ದಾಳಿ
ಸತ್ತವು ಗುಬ್ಬಿ ಹದ್ದು
ಮಾಯವಾದವು ಅಳಿಲು
ನೆಲ ಜಲ ಮರ ಗಿಡ
ಕಾಡು ಕಡಿದರು
ಕೊಳ್ಳೆ ಹೊಡೆದರು
ಗಣಿ ಲೂಟಿ ಮಾಡಿ
ಅತಿ ವೃಷ್ಟಿ ಅನಾವೃಷ್ಟಿ
ಈಗಲಾದರೂ ಮನುಜ
ಏಳ ಬೇಕು
ಜೀವ ಜಲದ ಬೇರಿಗೆ
ನೀರು ಹಣಿಸ ಬೇಕು
ಇಲ್ಲದಿರೆ ಬರಡಾಗುವಳು
ಬರಡಾದಳು ಭೂದೇವಿ
ಹೆತ್ತ ಒಡಲ ನೋವು
ಬಿಕ್ಕತಿಹಳು ಭೂ ತಾಯಿ
ಬಂಜೆ ಬೇನೆ ತೊರೆಯಲು
ಆಗದಿರಲಿ ಭೂಮಿ ಮತ್ತೆ ಬಂಜೆ
—————————————-
ಅನಿತಾ ಸಿದ್ದಣ್ಣವರ, ಬೆಳಗಾವಿ

Latest News

ಸಂಘಗಳಿಂದ ರೈತರ ಹೋರಾಟಕ್ಕೆ ಬೆಂಬಲ ಘೋಷಣೆ

ಹಳ್ಳೂರ- ಗ್ರಾಮದ ಶ್ರೀ ಬಸವೇಶ್ವರ ವೃತ್ತದಲ್ಲಿ ಹಳ್ಳೂರ, ಹಾಗೂ ಶಿವಾಪೂರ ಗ್ರಾಮದ ಸಹಕಾರಿ ಸಂಘ ಹಾಗೂ ಬ್ಯಾಂಕುಗಳ ಸಿಬ್ಬಂದಿಗಳು ಸ್ವಯಂ ಪ್ರೇರಿತವಾಗಿ ಒಂದು ದಿನ ಸಹಕಾರಿ,...

More Articles Like This

error: Content is protected !!
Join WhatsApp Group