- Advertisement -
ಪಲ್ಲವಿಯಾಗಿ
______________
ಬಂದು ಬಿಡೆ
ನನ್ನ ಮುದ್ದೆ
ಬಂದು ಬಿಡು
ನನ್ನ ಜೊತೆಗಾಗಿ
ಗತಕಾಲದ ಬೇಸರಕೆ
ತಂಪು ನಗೆಯಾಗಿ
ಬಂದು ಬಿಡು
ನನ್ನೆದೆಯ ಗೀತೆಗೆ
ಇಂಚರದ ದನಿಯಾಗಿ
ಬದುಕಿನ ಕತ್ತಲೆಗೆ
ಹೊಂಗಿರಣ ಬೆಳಕಾಗಿ
ಬಂದು ಬಿಡು
ನಗುಮೊಗದ
ಕಿರುನಗೆಯು ನೀನಾಗಿ
ಕಂಗಳಲಿ ಉದಯಿಸುವ
ಕಾಂತಿಯಾಗಿ
ಬಂದು ಬಿಡು ನೀ
ನನ್ನೆದೆಯ ಕನಸುಗಳ
ಉಸಿರಾಗ ಬೇಕು
ಹೃದಯದ ಬಯಕೆಗೆ
ತನ್ನೆಳಲು ಬನವಾಗ ಬೇಕು
ನೀನಿರ ಬೇಕು ಎನ್ನ ಬಾಳ ಗೀತೆಗೆ
ಸ್ವರ ಪ್ರಾಸ ಪಲ್ಲವಿಯಾಗಿ
______________________
ಗಾಯತ್ರಿ ಸಾಕೇನವರ ಗದಗ