- Advertisement -
ಮಧುರ ಭಾವದ ಒಡತಿ
ಮಲಗು ನನ್ನಯ ಗೆಳತಿ
ಮಧುರ ಭಾವದ ಒಡತಿ
ಹಸಿರು ಚಿಗುರಿನ ಪ್ರೀತಿ
ಸತ್ಯ ಸಮತೆ ಶಾಂತಿ
ಬಿಳಿಯ ಮೋಡದ ಮಧ್ಯೆ
ಬರುವ ಐರಾವತವು
ಕನಸುಗಳ ಮೂಟೆ
ಒಲವ ಸ್ನೇಹ
- Advertisement -
ತಿಳಿಗೊಳದ ತಾವರೆ
ಗಿಡ ಪೊದರ ಹಕ್ಕಿ
ಭಾವ ಗೀತೆಯ ಇಂಚರ
ಸುಳಿಗಾಳಿಯ ಸ್ವರವು
ನಗೆ ನಲುಮೆ ಸಗ್ಗ
ಹೆಣೆದ ಅಕ್ಷರ ಹಗ್ಗ
ದೂರ ಪಯಣದ ಕಗ್ಗ
ಬಾಳ ಬಟ್ಟೆಯ ಮಗ್ಗ
*ಡಾ ಶಶಿಕಾಂತ ಪಟ್ಟಣ ರಾಮದುರ್ಗ*