ಬಹಾದ್ದೂರ್- ಬಾಪೂಜಿ
ಭಾರತ ಮಾತೆಯ ಪಾಪು
ನೀನೇ ನಮ್ಮಯ ಬಾಪೂಜಿ
ಭಾರತಾಂಬೆಯ ಶಕ್ತಿಯ ಸೊಂಪು
ನೀನೇ ನಮ್ಮಯ ಶಾಸ್ತ್ರೀಜೀ
ನಿಮ್ಮಯ ಈ ಜನುಮ ದಿನ
ಭಾರತೀಯರ ಸಂತಸದ ಕ್ಷಣ
ಸಂಭ್ರಮದಿ ಸೇರಿ ನಾವುಗಳೆಲ್ಲ
ಸ್ಮರಿಸೋಣ ಈ ದಿವ್ಯ ಚೇತನಗಳ
ಜಾತಿ ಧರ್ಮ ಮತಗಳ ಕೊಂದು
ಭಾರತೀಯರು ನಾವೆಲ್ಲ ಒಂದು
ಭಾವೈಕ್ಯತೆಯಲಿ ಕೂಡಿ ಬಾಳುವೆವು
ಭೇಧ ಭಾವಗಳ ತೊರೆದು
ಶಾಂತಿ ಅಹಿಂಸೆ ನಿಮ್ಮಯ ಪಾಠ
ನಮ್ಮ ಬಾಳಿಗೆ ರಸದೂಟ
ದಾರಿ ದೀಪವು ನಮಗೆಲ್ಲ
ಆ ದಿಟ್ಟತನದ ನಿಮ್ಮ ಹೋರಾಟ
ರೈತ, ಯುವಪಡೆಯ ಕಾರ್ಯವೈಖರಿ
ದೇಶದ ಬೆನ್ನೆಲುಬು ಎಂದಿರಿ
ಸರಳ ಸಜ್ಜನಿಕೆಯ ವ್ಯಕ್ತಿತ್ವ
ಆಯಿತು ನಮಗೆ ಮಾದರಿ
ಉಳಿಸುವೆವು ನಿಮ್ಮ ಧ್ಯೇಯಗಳ
ಅನುಸರಿಸುವೆವು ನಿಮ್ಮ ಸಿದ್ದಾಂತಗಳ
ಮಹಾತ್ಮರೇ ಹರಸಿ ನಮಗಿಂದು
ಸುಖವಾಗಿರಲಿ ಭಾರತಾಂಬೆಯ ಕುಡಿಗಳು
ಡಾ. ಮಹೇಂದ್ರ ಕುರ್ಡಿ
ಹಟ್ಟಿ ಚಿನ್ನದ ಗಣಿ