- Advertisement -
ಅನಾಥರ ನಾಥ
ಅಬಲ ಅಶಕ್ತ
ಅಸ್ಪ್ರಶ್ಯ ಅನಾಥ
ಅನಾಥರ ನಾಥ
ಸಂಗಮನಾಥ
ಹೇ ಬಸವೇಶ್ವರ
ಒಳಗೊಳಗೆ ಬೆಂದ
ಶತಮಾನದ ಅಸಮತೆ
ಜಾತಿ ವರ್ಗ ವರ್ಣ
ಕಿತ್ತೆಸೆದೆ ವೀರ
ಶಾಂತಿ ಪ್ರೀತಿಗೆ
ಜೀವ ತೇಯ್ದ ಯೋಧ
ಕೊನೆಗೊಳಿಸಿದೆ
ಸನಾತನಿಗಳ ವಾದ
ಇಲ್ಲವಾದವು
ವೇದ ಆಗಮ ಪುರಾಣ
ಶಾಸ್ತ್ರ ಶಕುನ ಮುಹೂರ್ತವು
ಅಕ್ಷರ ಕಲಿಸಿ
ವಚನ ರಚಿಸಿ
ಬಟ್ಟೆಯಾದಿ ದೇವಲೋಕಕೆ
ಶ್ರಮದ ಬೆವರೆ
ಪುಣ್ಯ ತೀರ್ಥ
ಹಂಚಿ ತಿಂದರೆ ಸ್ವರ್ಗವು
ಕಟ್ಟಿಕೊಟ್ಟೆ ಮುಕ್ತ ಸಮಾಜವ
ನಾವು ಬದುಕಲಾರದ ಹೇಡಿಯು
ನಿನ್ನ ಸ್ಮರಣೆ ನಿತ್ಯ ಮಂತ್ರ
ಲಿಂಗವಂತ ಸ್ವತಂತ್ರರು..
ಸತ್ಯ ಹಾದಿ ಹುಡಕಲಿರುವ
ಬಸವ ಭಕ್ತರು ಶ್ರೇಷ್ಠರು.
————————————–
ಡಾ.ಶಶಿಕಾಂತ.ಪಟ್ಟಣ. ರಾಮದುರ್ಗ